Home ಜಿಲ್ಲೆ ಹೆಸ್ಕಾಂ ಎ.ಇ.ಇ. ಮನೆ, ಕಚೇರಿ ಮೇಲೆ ಲೋಕಾ ದಾಳಿ

ಹೆಸ್ಕಾಂ ಎ.ಇ.ಇ. ಮನೆ, ಕಚೇರಿ ಮೇಲೆ ಲೋಕಾ ದಾಳಿ


ಹುಬ್ಬಳ್ಳಿ,ಸೆ.೨೨: ಹೆಸ್ಕಾಂ ಎಇಇ ಕಿರಣಕುಮಾರ ಬೈಂದೂರ ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಧಾರವಾಡದಲ್ಲಿರುವ ಅವರ ಸಹೋದರನ ಮನೆಯ ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಹುಬ್ಬಳ್ಳಿ ಹೆಸ್ಕಾಂ ಕಚೇರಿಯಲ್ಲಿ ಎಇಇ ಆಗಿರೋ ಕಿರಣ್ ಕುಮಾರ ಅವರ ಹುಬ್ಬಳ್ಳಿ ನಗರದ ಅಕ್ಷಯ ಕಾಲನಿ ಯಲ್ಲಿರೋ ಮನೆ, ಕಚೇರಿ ಸೇರಿ ಒಟ್ಟು ನಾಲ್ಕು ಕಡೆ ದಾಳಿ ಮಾಡಲಾಗಿದೆ.
ಕಿರಣಕುಮಾರ ಬೈಂದೂರ ಅವರ ಪತ್ನಿ ಪ್ರೀತಿ ಅವರು ಕೂಡ ಹೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದು, ತಬೀಬ್ ಲ್ಯಾಂಡ್, ಗೋಪನಕೊಪ್ಪನಲ್ಲಿನ ಹೆಸ್ಕಾಂ ಕಚೇರಿ, ಕಿರಣಕುಮಾರ ಸಹೋದರ ಮನೆ ಮೇಲೆ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.


ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು ಡಿ.ವೈ.ಎಸ್.ಪಿ. ಬಸವರಾಜ್ ಬುದ್ನಿ ಒಳಗೊಂಡ ತಂಡ ಪರಿಶೀಲನೆ ನಡೆಸುತ್ತಿದೆ.