Home ಜಿಲ್ಲೆ ಚಾಣಾಕ್ಷ ಅರ್ಥಶಾಸ್ತç ಉತ್ಸವ

ಚಾಣಾಕ್ಷ ಅರ್ಥಶಾಸ್ತç ಉತ್ಸವ


ನವಲಗುಂದ,sಸೆ.೨೨: ಸ್ಥಳೀಯ ಶ್ರೀ ಶಂಕರ ಮಹಾವಿದ್ಯಾಲಯದ ಅರ್ಥಶಾಸ್ತç ವಿಭಾಗ ಹಾಗೂ ಯೋಜನಾ ವೇದಿಕೆ ವತಿಯಿಂದ ಚಾಣಾಕ್ಷ – ೨೦೨೬ ಅರ್ಥಶಾಸ್ತç ಉತ್ಸವದ ಅಂಗವಾಗಿ ಕೃಷಿ ಕೌಶಲ್ಯ, ಚರ್ಚಾ ಸ್ಪರ್ಧೆ, ಪ್ರದರ್ಶನ ಸ್ಪರ್ಧೆ, ರಂಗೋಲಿ ರೇಖಾಚಿತ್ರ, ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ, ನಾವಿನ್ಯತೆಯ ಮನಸ್ಸುಗಳು ಹಾಗೂ ಸೃಜನಾತ್ಮಕ ಚಿತ್ರೀಕರಣ ಕಾರ್ಯಕ್ರಮಗಳಿಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್. ವ್ಹಿ. ಬಡಿಗೇರ ಚಾಲನೆ ನೀಡಿದರು.


ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಆರ್ಥಿಕತೆಯ ಜ್ಞಾನ, ಜೀವನ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಂತ ಮಹತ್ವದ್ದಾಗಿವೆ. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಬಳಪ, ಆಹಾರ ಧಾನ್ಯ, ರಂಗೋಲಿ ಬಳಸಿ ಅರ್ಥಶಾಸ್ತçಕ್ಕೆ ಸಂಬAಧಿಸಿದ ರೇಖಾಚಿತ್ರಗಳನ್ನು ಸುಂದರವಾಗಿ ಬಿಡಿಸಿದ ಚಿತ್ರಿ, ಉದ್ಯಾನವನದಲ್ಲಿ ಹಲವಾರು ದಿನಗಳಿಂದ ವಿವಿಧ ಬೆಳೆಗಳನ್ನು ಬೆಳೆದು ಅರ್ಥಶಾಸ್ತçದ ಪರಿಕಲ್ಪನೆಗಳನ್ನು ಕೃಷಿ ಕೌಶಲ್ಯದ ಮೂಲಕ ಸರಳವಾಗಿ ತೋರ್ಪಡಿಸಿದ್ದಾರೆ ಎಂದರು.
ಸ್ಪರ್ಧೆಗಳ ಆಯೋಜಕರಾದ ಯೋಜನಾ ವೇದಿಕೆ ಕಾರ್ಯಾಧ್ಯಕ್ಷರು ಹಾಗೂ ಅರ್ಥಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜಿ. ಎಸ್. ಚಿಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಸುಶ್ಮಿತಾ ಜಂಗವಾಡ ಮತ್ತು ಪ್ರೀತಿ ಯಾದವಾಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.


ಮಹಾವಿದ್ಯಾಲಯದ ಆಯ್.ಕ್ಯು.ಎ.ಸಿ ಸಂಯೋಜಕ ಪಿ. ಜಿ. ಕೊಪ್ಪದ, ಎಸ್ . ಎಮ್. ತುಬಚಿ, ಎ.ಜಿ. ಜಕ್ಕನಗೌಡರ, ಎಮ್. ಎನ್ ಹಾರೋಗೇರಿ, ಆರ್. ಎಮ್. ಸರ್ವದೆ, ಆರ್. ಎಸ್. ಹಿರೇಮಠ, ಬಿ. ಕೆ. ಬಂಕಾಪುರ, ವಿ.ಎ ಸಾವಂತ್, ಎ.ಎ. ಯಮನೂರ, ಎಮ್. ವಿ. ಹೊಳೆನ್ನವರ ಮತ್ತು ಮಹೇಶ್ ಬಿ.ಕೆ ಇದ್ದರು.