Home ಜಿಲ್ಲೆ ಸಿದ್ದಿವಿನಾಯಕನಿಗೆ ವೈಭವದ ವಿದಾಯ

ಸಿದ್ದಿವಿನಾಯಕನಿಗೆ ವೈಭವದ ವಿದಾಯ


ನವಲಗುಂದ,ಸೆ.೧೯: ಇಲ್ಲಿಯ ಸಿದ್ದಿವಿನಾಯಕ ಹಾಗು ಲಕ್ಷಿ÷್ಮÃ ಪಾರ್ಕ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವವು ಭಕ್ತ ಸಾಗರದ ನಡುವೆ ಅತ್ಯಂತ ವಿಜೃಂಭಣೆಯಿAದ ರಾತ್ರಿ ನೆರವೇರಿತು.
ಕಳೆದ ಐದು ದಿನಗಳಿಂದ ಪೂಜಿಸಲ್ಪಟ್ಟ ವಿಘ್ನನಿವಾರಕನಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಹಾಗು ನೈವೇದ್ಯಗಳನ್ನು ಸಮರ್ಪಿಸಿದ ಬಳಿಕ ಸಂಘದ ಪದಾಧಿಕಾರಿಗಳು, ನೂರಾರು ಭಕ್ತರ ಸಮ್ಮುಖದಲ್ಲಿ ಉತ್ತರ ಪೂಜೆ ನೆರವೇರಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.


ಗಣೇಶ ಮೂರ್ತಿಯನ್ನು ಪುಷ್ಪಾಲಾಂಕೃತ ವಾಹನದಲ್ಲಿ ಪ್ರತಿಷ್ಟಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ದಾರಿಯುದ್ಧಕ್ಕೂ ಭಕ್ತರು ಕರ್ಪೂರ ಬೆಳಗಿ, ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.


ಸಂಘದ ಅಧ್ಯಕ್ಷ ನಿಂಗಪ್ಪ ಬಾರಕೇರ, ಉಪಾಧ್ಯಕ್ಷ ದಾವಲ್ ಸಾಬ ನಾಯ್ಕರ್, ಕಾರ್ಯದರ್ಶಿ ಶೇಖರ ಇನಾಮತಿ, ಪದಾಧಿಕಾರಿಗಳಾದ ವ್ಹಿ ಎಚ್ ಕಿರೆಸೂರ, ಮಲ್ಲಿಕಾರ್ಜುನ ಗಂಗನಗೌಡರ, ರಂಗನಗೌಡ ಬಾಳನಗೌಡರ, ಬೂದಪ್ಪ ಬಾಗಲಕೋಟಿ, ಮಹದೇವಪ್ಪ ಮಾಳವಾಡ, ವಿನಾಯಕ ಮಟಿಗಾರ, ಪರಶುರಾಮ ಹಡಪದ, ಎಸ್. ಹುಯಿಲಗೋಳ, ಬಸವರಾಜ ಕಟ್ಟಿಮನಿ, ಜಗನ್ನಾಥ ರಂಗಣ್ಣವರ, ವೀರಣ್ಣ ಹಾದಿಮನಿ, ಬುಡ್ನಾಜಿ ಕಲಾಲ, ಮಾಗುಂಡಪ್ಪ ಕರಿಯಪ್ಪನವರ, ಆರ್. ಎಚ್. ನೆಗಲಿ, ಎಲ್.ವೈ. ರಾಯಪ್ಪನವರ, ರಾಮಣ್ಣ ದಿವಟರ ಪಾಲ್ಗೊಂಡಿದ್ದರು.