
ಕಲಬುರಗಿ:ಪ್ರತಿ ವರ್ಷದಂತೆ ಈ ವರ್ಷವೂ ನಗರದಅಪ್ಪಾ ಪಬ್ಲಿಕ್ ಶಾಲೆಯ ಮಿಡಲ್ ಸೆಕ್ಷನ್ನಲ್ಲಿಸೆಪ್ಟೆಂಬರ್ ೧೫, ೨೦೨೬ರಂದು ೬ನೇ ತರಗತಿಯ ವಿದ್ಯಾರ್ಥಿಗಳಿಗಾಗಿ”ಆಂತರಿಕ ಶಾಲಾ ಸ್ಪೆಲ್ಲಿಂಗ್ ಬೀ – ಅಧ್ಯಾಯ ೬” (Iಟಿಣಡಿಚಿ-Sಛಿhooಟ Sಠಿeಟಟiಟಿg ಃee – ಅhಚಿಠಿಣeಡಿ ಗಿI)ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ೬ನೇ ತರಗತಿಯ ವಿವಿಧ ವಿಭಾಗಗಳಿಂದ ಆಯ್ಕೆಯಾದ೫೧ ವಿದ್ಯಾರ್ಥಿಗಳುಎರಡನೇ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲರಾದಶ್ರೀ ಶಂಕರಗೌಡ ಹೊಸಮನಿ, ಉಪಪ್ರಾಂಶುಪಾಲರಾದಶ್ರೀ ವಿಜು ಕಲ್ಲರ್ ಜೋಸ್, ವಿಭಾಗ ಸಂಯೋಜಕರಾದಶ್ರೀಮತಿ ಆಶಾರಾಣಿ ಪಾಟೀಲ್, ಸ್ಪೆಲ್ಲಿಂಗ್ ಬೀ ಸಂಯೋಜಕರಾದಶ್ರೀ ಮಂಜುನಾಥ ಪಾಟೀಲ್ ಹಾಗೂ ಶ್ರೀಮತಿ ಸುನೀತಾ ಜುಪ್ಪಳ್ಳಿ, ಕು. ಆರ್ಶೀಮಾ ಪ್ರಸಾದ್ಹಾಗೂ ಕಳೆದ ವರ್ಷದ ವಿಜೇತ ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸ್ಪರ್ಧೆಯ ಕುರಿತು ಮಾತನಾಡಿದ ಪ್ರಾಂಶುಪಾಲರಾದಶ್ರೀ ಶಂಕರಗೌಡ ಹೊಸಮನಿಯವರು, ವಿದ್ಯಾರ್ಥಿಗಳಿಗೆ ‘ಇಂಜಿನಿಯರ್ಸ್ ಡೇ’ ಯ ಶುಭಾಶಯಗಳನ್ನು ತಿಳಿಸುತ್ತ, ಕೆಲವು ಇಂಗ್ಲಿಷ್ ಪದಗಳಉಚ್ಚಾರಣೆ ಒಂದೇ ರೀತಿಯಾಗಿದ್ದರೂ ಅವುಗಳ ಸ್ಪೆಲ್ಲಿಂಗ್ ವಿಭಿನ್ನವಾಗಿರಬಹುದು. ಆದ್ದರಿಂದ ಪದದ ಉಚ್ಚಾರಣೆಯನ್ನು ಗಮನವಿಟ್ಟು ಕೇಳಿ, ಅದರ ಸರಿಯಾದ ಸ್ಪೆಲ್ಲಿಂಗ್ ಅನ್ನು ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೆ, ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ದೊರೆಯುತ್ತದೆ; ಆದರೆ ಸೋಲು ಕೂಡ ಒಂದುಪಾಠವಾಗಿದ್ದು, ಮುಂದಿನ ಪ್ರಯತ್ನಕ್ಕೆ ದಾರಿದೀಪವಾಗುತ್ತದೆಎಂದು ಹೇಳಿ, ಸೋಲನ್ನು ಧೈರ್ಯದಿಂದ ಸ್ವೀಕರಿಸಿ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಇAತಹ ಸ್ಪರ್ಧೆಗಳು ವಿದ್ಯಾರ್ಥಿಗಳವಿಮರ್ಶಾತ್ಮಕ ಚಿಂತನೆ, ಭಾಷಾ ಕೌಶಲ್ಯ, ಪದಸಂಪತ್ತು ಹಾಗೂ ಆತ್ಮವಿಶ್ವಾಸವನ್ನುಹೆಚ್ಚಿಸಲು ಸಹಕಾರಿಯಾಗುತ್ತವೆ. ಹೊಸ ಪದಗಳ ಅರ್ಥ, ಬಳಕೆ ಮತ್ತು ವ್ಯಾಖ್ಯಾನಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಅವುಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಭಾಷಾ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಹುದು ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಿದರು.





























