
ಸೇಡಂ , ಸೆ ,೧೬: ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರಗತಿ ನೆಲೆಸಬೇಕಾದರೆ ಸುಸಂಸ್ಕೃತ ಪೀಳಿಗೆ ರೂಪುಗೊಳ್ಳಬೇಕು ಅಂದರೆ ಅಂತಹ ಉತ್ತಮ ಸಮಾಜ ನಿರ್ಮಾಣಕ್ಕೆ ಪೋಷಕರ ಶಿಸ್ತು ಕಟ್ಟುನಿಟ್ಟಿನ ಜೀವನಶೈಲಿ ಮತ್ತು ನೀಡುವ ಸಂಸ್ಕಾರವೇ ಮೂಲ ಅಡಿಪಾಯ ಎಂದು
ಪರಮ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಹೇಳಿದರು. ಪಟ್ಟಣದಲ್ಲಿರುವ ಶ್ರೀ ವೀರಭದ್ರೇಶ್ವರ ಗಜಾನನ ನವ ತರುಣ ಸಂಘ ಪೋಲಿಸ್ ಪಾಟೀಲ್ ಗಲ್ಲಿಯ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರಸ್ತುತ ಸಮಾಜದಲ್ಲಿ ಪೋಷಕರಲ್ಲಿ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಬದಲಾವಣೆಯಿಂದ ಸಮಾಜದಲ್ಲಿ ಕೆಟ್ಟ ಪರಿಣಾಮ ಬೀಳುತ್ತಿದೆ ಎಂದು ಎಚ್ಚರಿಸಿದ ಶ್ರೀಗಳು ಮಕ್ಕಳು ಪೋಷಕರ ಉಪದೇಶಕ್ಕಿಂತ ಅವರ ನಡೆ ನುಡಿಗಳನ್ನು ಹೆಚ್ಚು ಗಮನಿಸಿ ಅನುಕರಿಸುತ್ತಾರೆ. ಮನೆ ವಾತಾವರಣದಲ್ಲಿ ಹಿರಿಯರಿಗೆ ಗೌರವ, ಪ್ರೀತಿ ಮತ್ತು ಶಿಸ್ತಿದ್ದರೆ ಮಕ್ಕಳು ತಾವಾಗಿಯೇ ಸುಸಂಸ್ಕೃತರಾಗಿ ಬೆಳೆಯುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ತಂತ್ರಜ್ಞಾನದ ಬಳಕೆಯ ಜೊತೆಗೆ ನೈತಿಕ ಮೌಲ್ಯಗಳ ಅಗತ್ಯವಿದೆ. ಪೋಷಕರು ಮಕ್ಕಳೊಂದಿಗೆ ಪ್ರತಿದಿನ ಗುಣಮಟ್ಟದ ಸಮಯ ಕಳೆದು, ಒಳ್ಳೆಯ ವಿಚಾರಗಳನ್ನು ಧಾರೆ ಎರೆಯಬೇಕು. ರೂಪಾದೇವಿ ಬಂಗಾರ ಮಾತನಾಡಿದರು,
ಈ ವೇಳೆಯಲ್ಲಿ ನಾಗಯ್ಯ ಸ್ವಾಮಿ ಬೊಮ್ಮನಳ್ಳಿ, ಸಿದ್ದಪ್ಪ ತಳ್ಳಳ್ಳಿ, ಶರಣಯ್ಯ ಸ್ವಾಮಿ, ಶಿವಾನಂದ ಸ್ವಾಮಿ, ವೀರಭದ್ರಯ್ಯ ಸ್ವಾಮಿ, ಪತ್ರಕರ್ತರಾದ ಸಿದ್ದಯ್ಯಸ್ವಾಮಿ ಆಡಕಿ, ಸುರೇಶ್ ಬಿಜನಳ್ಳಿ ಹಾಗೂ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.





























