Home ಜಿಲ್ಲೆ ಸಹಕಾರವೇ ಸಹಬಾಳ್ವೆಗೆ ದಾರಿ ದೀಪ: ಸಂಜೀವಕುಮಾರ ಪಾಟೀಲ

ಸಹಕಾರವೇ ಸಹಬಾಳ್ವೆಗೆ ದಾರಿ ದೀಪ: ಸಂಜೀವಕುಮಾರ ಪಾಟೀಲ

ಬೀದರ:ಸಮಾಜದಲ್ಲಿ ಒಬ್ಬರಿಗೆ ಸಹಕರಿಸಿ ಅವರ ಎಳ್ಗೇಗೆ ಕೈ ಜೋಡಿಸಲು ಸಹಕಾರಿ ಸಂಘಗಳು ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿವೆ ಎಂದು ವಕೀಲರಾದ ಸಂಜೀವಕುಮಾರ ಪಾಟೀಲ ನುಡಿದರು.
ಮನ್ನಳ್ಳಿ ರಸ್ತೆಯಲ್ಲಿರುವ ಪೋಲಾ ಕನ್ವೆನ್ಶನ್ ಹಾಲ್‌ನಲ್ಲಿ ಇತ್ತೀಚಿಗೆ ವಚನ ಸೌಹಾರ್ದ ಸಹಕಾರ ಸಂಘ ನಿಯಮಿತ ಬೀದರನ ಮೂರನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿದ ಬಾಲ ವಿಕಾಸ ಮಂಡಳಿ ಸದಸ್ಯರಾದ ಸಂಜೀವಕುಮಾರ ಪಾಟೀಲ ಮುಂದುವರೆದು ಇಂದು ಅನೇಕರಿಗೆ ಆರ್ಥಿಕವಾಗಿ ತೊಂದರೆಯಾಗುವುದು ಸಹಜ. ತಕ್ಷಣವೇ ಸಾಲ ಬೇಕೆಂದರೆ ಬ್ಯಾಂಕಗಳ ದಾಖಲೆಗಳನ್ನು ಕ್ರೋಡೀಕರಿಸುವುದು ಕಷ್ಟ, ಆದರೆ ಪತ್ತಿನ ಸಹಕಾರ ಸಂಘಗಳು ಸಂದಿಗ್ಧತೆಯ ಸಂಕಷ್ಟವನ್ನೂ ದೂರ ಮಾಡಲು ತಕ್ಷಣ ಸಾಲ ನೀಡುವುದಲ್ಲದೆ ಒಳ್ಳೆ ರೀತಿಯಿಂದ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದರು.

ಕರ್ನಾಟಕ ರಾಜ್ಯ ಸರಕಾರಿ ಅನುದಾನಿತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮುಖ್ಯ ಅತಿಥಿಗಳಾಗಿ.. ವಚನ ಸೌಹಾರ್ದ ಪತ್ತಿನ ಸಹಕಾರ ಸಂಘ ಕೇವಲ ಮೂರೆ ವರ್ಷದಲ್ಲಿ ಎರಡು ಲಕ್ಷ ಲಾಭ ಪಡೆದುದ್ದಲ್ಲದೆ,ಅನೇಕರ ಕಷ್ಟ ಗಳಲ್ಲಿ ಸಹಭಾಗಿಯಾಗಿ ಸೌಹಾರ್ದತೆ ಮೆರೆದಿದೆ. ಇಲ್ಲಿಯವರೆಗೆ ಒಬ್ಬ ಸದಸ್ಯ ಸಹ ಡಿ ಫಾಲ್ಟರ್ ಅಗಿಲ್ಲ ಎಂಬ ವಿಷಯ ಅರಿತು ಸಂತಸವಾಗಿದೆ. ಸದಸ್ಯರಿಗೆ ಕಷ್ಟ ಕಾಲದಲ್ಲಿ ಸಹಕರಿಸುವುದು ನಮ್ಮ ಜವಾಬ್ದಾರಿ, ಆದರೆ ತೆಗೆದುಕೊಂಡ ಸಾಲ ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುವ ಪ್ರಮುಖ ಜವಾಬ್ದಾರಿ ಮರೆಯಬಾರದು. ಹೀಗಾದಾಗ ಮಾತ್ರ ಸಂಘ ಸಂಸ್ಥೆಗಳು ಕ್ರಿಯಾಶೀಲವಾಗಿ ಸಾಮಾಜಿಕವಾಗಿ ಕಾರ್ಯ ಮಾಡಲು ಸಾಧ್ಯ ಎಂದರು.

ಸAಘದ ಅಧ್ಯಕ್ಷರಾದ ಶಿವಕುಮಾರ ಸಾಲಿ ಅಧ್ಯಕ್ಷತೆ ವಹಿಸಿ… ನಮ್ಮಲ್ಲಿ ಮೊದಲು ಕಷ್ಟ ಇದ್ದವರಿಗೆ ಸಹಕಾರ ಮಾಡುತ್ತೇವೆ. ಮರುಪಾವತಿ ಮಾಡಿದ ಸದಸ್ಯರಿಗೆ ಕರೆದು ಸಾಲ ಕೊಡುತ್ತೇವೆ. ನಮ್ಮಲ್ಲಿ ಇ ಬಾಂಡ್ ಕೂಡ ದೊರೆಯುತ್ತದೆ, ಇದರ ಲಾಭವನ್ನು ಗ್ರಾಹಕರೆಲ್ಲರೂ ಪಡೆಯಬೇಕೆಂದರು. ಸಂಕಷ್ಟದಲ್ಲಿ ಸಾಲ ಪಡೆದು ನಿಗದಿತ ಅವಧಿಯೊಳಗೆ ಮರು ಪಾವತಿ ಮಾಡಿರುವ ವಿಷ್ಣುಕಾಂತ ಶರಣಪ್ಪ, ಶಿವಕುಮಾರ ಕುಂಬಾರ, ಧನರಾಜ ಮಾಣಿಕಪ್ಪ ಅವರುಗಳಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಪ್ರಕಾಶ ಗಂದಿಗುಡಿ ಸ್ವಾಗತ ಆನಂದಕುಮಾರ ಬೆಡಸೂರೆ, ನಿರೂಪಣೆ ಪ್ರತಿಭಾ ಜೀರಗೆ ಹಾಗೂ ವಂದನಾರ್ಪಣೆಯನ್ನು ಪ್ರಕಾಶ ಮಠಪತಿ ಮಾಡಿದರೆ ರೇಖಾ ನಿಂಗದಳ್ಳಿ ವಚನ ಪ್ರಾರ್ಥನೆ ಮಾಡಿದರು. ವೇದಿಕೆ ಮೇಲೆ ಅಲ್ಲಮಪ್ರಭು ನಾವದಗೇರೆ, ಡಾ ಸುರೇಶ ಪಾಟೀಲ, ಡಾ ಶಿವಶಂಕರ ಟೋಕರೆ, ಪ್ರದೀಪ್ ವಿಸಾಜಿ, ಶರಣು ಟೊಳ್ಳೆ, ಶ್ವೇತಾ ರೆಡ್ಡಿ, ಮಹಾದೇವಿ ನಿಂಗದಳ್ಳಿ, ಸಂಜೀವಕುಮಾರ ಪಾಟೀಲ ಉಪಸ್ಥಿತಿಯಾಗಿದ್ದರು.