
ಕೆ.ಆರ್.ಪುರ,ಸೆ.೩- ಗೌರಿಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ಶಾಸಕ ಬೈರತಿ ಬಸವರಾಜ ಅವರು ಮನವಿ ಮಾಡಿದರು.
ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರದಲ್ಲಿ ಹಾಗೂ ಎನ್ ಆರ್ ಐ ಬಡಾವಣೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ, ಅರಿಶಿನ, ಕುಂಕುಮ, ಬಳೆಯೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಪರಿಸರ ಹಾನಿಕಾರಕ ಕೆಮಿಕಲ್ ಗಳಿಂದ ತಯಾರಾದ ಗಣೇಶನ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಮೂರ್ತಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಕ್ಷೇತ್ರದಲ್ಲಿನ ಸರ್ವಧರ್ಮಗಳ ಜನರಿಗೆ ರಂಜಾನ್, ಕ್ರಿಸ್ ಮಸ್, ದಸರಾ, ದೀಪಾವಳಿ ಗೌರಿ ಗಣೇಶ ಹಬ್ಬಗಳಲ್ಲಿ ಕೈಲಾದ ಸಹಾಯ ಮಾಡುವ ಮೂಲಕ ಕೆ.ಆರ್.ಪುರ ಕ್ಷೇತ್ರದಲ್ಲಿ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹಲವು ವರ್ಷಗಳಿಂದ ನಮ್ಮ ಕುಟುಂಬದ ಸಂಪ್ರದಾಯದಂತೆ ಕ್ಷೇತ್ರದ ಬಡ ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಪ್ರತಿ ವರ್ಷ ಬಾಗಿನ ರೂಪದಲ್ಲಿ ಅರಿಶಿನ ಕುಂಕುಮ ಬಳೆಯೊಂದಿಗೆ ಸೀರೆ ವಿತರಣೆ ಮಾಡುವ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ದೂರವಾಣಿನಗರ ವಾರ್ಡನ ಆಕಾಂಕ್ಷಿ ಪ್ರದೀಪ್ ಗೌಡ ಅವರು ಮಾತನಾಡಿ ಪ್ರತೀ ವಾರ್ಡಿನಲ್ಲಿ ೧೦ ಸಾವಿರಕ್ಕೂ ಹೆಚ್ಚು ಸೀರೆ ವಿತರಿಸಲು ಬಾಗಿನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ಶಾಸಕರಾದ ಬಸವರಾಣ್ಣ ಅವರ ಸಮ್ಮುಖದಲ್ಲಿ ಮುಖಂಡರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಗುತ್ತದೆ. ಮುಂದೆಯೂ ಕೂಡ ನಿರಂತರವಾಗಿ ಮಹಿಳೆಯರು ದುಃಖ ದುಮ್ಮಾನಗಳಿಗೆ ಅಣಿಯಾಗಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಬಿಎ ಆಕಾಂಕ್ಷಿಗಳಾದ ಪ್ರದೀಪ್ ಗೌಡ, ಎಂಎಲ್.ಡಿ.ಸಿ ಮುನಿರಾಜು, ಬಾಬುಸೆಲ್ವಂ,ವಾರ್ಡನ ಅಧ್ಯಕ್ಷರಾದ ರಮೇಶ್ ಗೌಡ,ಗೋಪಾಲಣ್ಣ ಇತರರು ಇದ್ದರು.
































