Home ಜಿಲ್ಲೆ ಕಲಬುರಗಿ ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನ, ನಗದು ಕಳವು

ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನ, ನಗದು ಕಳವು

ಕಲಬುರಗಿ,ಸೆ.3-ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ನಗದು ಹಣ ಕಳವು ಮಾಡಿರುವ ಘಟನೆ ತಾಡತೆಗನೂರ ಗ್ರಾಮದಲ್ಲಿ ನಡೆದಿದೆ.
ರಜಿಯಾ ದಾವಲಸಾಬ್ ಶೇಕ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 40 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಬೋರಮಳ, 30 ಸಾವಿರ ಸಾವಿರ ರೂ.6 ಗ್ರಾಂ.ಬಂಗಾರದ ಜೀರಾಮಣಿ, 10 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಒಂದು ಜೊತೆ ಕಿವಿಯೋಲೆ, 10 ಸಾವಿರ ರೂ.ನಗದು ಸೇರಿ 1.40 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ನಗದು ಕಳವು ಮಾಡಿದ್ದಾರೆ.
ರಜಿಯಾ ದಾವಲಸಾಬ್ ಶೇಕ್ ಅವರು ಮನೆಗೆ ಬೀಗ ಹಾಕಿಕೊಂಡು ಮಗಳೊಂದಿಗೆ ಕೂಲಿ ಕೆಲಸಕ್ಕೆ ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.