Home ಜಿಲ್ಲೆ ಕಲಬುರಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯ ಚಿನ್ನದ ಸರ ಕಳವು

ಮೆರವಣಿಗೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯ ಚಿನ್ನದ ಸರ ಕಳವು

ಕಲಬುರಗಿ,ಸೆ.3-ಡಾ.ಅಜಯ್ ಸಿಂಗ್ ಅವರು ಸಚಿವರಾದ ಮೇಲೆ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಪ್ರಯುಕ್ತ ಆಯೋಜಿಸಿದ್ದ ಸಂಭ್ರಮಾಚರಣೆಯ ಮೆರವಣಿಗೆಯಲ್ಲಿ ಭಾಗಹಿಸಿದ ವ್ಯಕ್ತಿಯೊಬ್ಬರ 1.20 ಲಕ್ಷ ರೂ.ಮೌಲ್ಯದ 12 ಗ್ರಾಂ.ಚಿನ್ನದ ಸರವನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.
ಎಂ.ಬಿ.ನಗರದ ಮಲ್ಲಿಕಾರ್ಜುನ ಬರುಡೆ ಎಂಬುವರ ಚಿನ್ನದ ಸರ ಕಳವಾಗಿದ್ದು, ಅವರು ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಡಾ.ಅಜಯ್ ಸಿಂಗ್ ಅವರು ಸಚಿವರಾದ ಮೇಲೆ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆ.22 ರಂದು ಸಂಭ್ರಮಾಚರಣೆಯ ಮೆರವಣಿಗೆ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ ಬರುಡೆ ಅವರು ಸಹ ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ರಾತ್ರಿ 8.30ರ ಸುಮಾರಿಗೆ ಜಗತ್ ವೃತ್ತದ ಬಳಿ ಬಂದ ಸಂದರ್ಭದಲ್ಲಿ ಕಳ್ಳರು ಅವರ ಕೊರಳಲ್ಲಿದ್ದ 1.20 ಲಕ್ಷ ರೂ.ಮೌಲ್ಯದ ಚಿನ್ನದ ಸರ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.