
ಹುಬ್ಬಳ್ಳಿ,ಸೆ.೨: ನಗರದ ವಿದ್ಯಾನಗರದ ಕೆ.ಎಲ್.ಇ. ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಸಮಾಜಶಾಸ್ತç ವಿಭಾಗದ ವತಿಯಿಂದ `ಸಕ್ರಿಯ ವೃದ್ಧಾಪ್ಯ: ದೈಹಿಕ, ಸಾಮಾಜಿಕ ಹಾಗೂ ಮಾನಸಿಕವಾಗಿ ಸಕ್ರಿಯವಾಗಿರುವುದು’ ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕಿ, ಸಮಾಜಶಾಸ್ತç ವಿಭಾಗದ ಮಾಜಿ ಹಿರಿಯ ಪ್ರಾಧ್ಯಾಪಕಿ, ಸಾಮಾಜಿಕ ವಿಜ್ಞಾನಗಳ ಮಾಜಿ ಡೀನ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಮಾಜಿ ಹಂಗಾಮಿ ಕುಲಪತಿಯಾದ ಪೊ?ರ. ಜಯಶ್ರೀ ಎಸ್. ಅವರು ಭಾಗವಹಿಸಿ ಉಪನ್ಯಾಸ ನೀಡಿದರು.
ವೃದ್ಧಾಪ್ಯವು ಕೇವಲ ಜೀವನದ ವರ್ಷಗಳನ್ನು ಹೆಚ್ಚಿಸುವುದಲ್ಲ, ಆ ವರ್ಷಗಳಿಗೆ ಅರ್ಥಪೂರ್ಣ ಬದುಕನ್ನು ನೀಡುವುದಾಗಿದೆ ಎಂದು ಅವರು ತಿಳಿಸಿದರು. ವಯೋವೃದ್ಧರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಸಂಬAಧಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಮಾನಸಿಕವಾಗಿ ಸಕ್ರಿಯರಾಗಿರಬೇಕು ಎಂದು ಸಲಹೆ ನೀಡಿದರು. ಆರೋಗ್ಯಕರ ವೃದ್ಧಾಪ್ಯಕ್ಕಾಗಿ ನಿಯಮಿತ ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಸಕಾರಾತ್ಮಕ ಚಿಂತನೆ ಮತ್ತು ಸಮಾಜದೊಂದಿಗೆ ನಿರಂತರ ಸಂಪರ್ಕ ಅಗತ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀಮತಿ ಸುಮಂಗಲಾ ಬಿ. ಪಾಟೀಲ ಅವರು ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ವಿಶೇಷ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳು ಆರೋಗ್ಯಕರ ಹಾಗೂ ಅರ್ಥಪೂರ್ಣ ಜೀವನದ ಕುರಿತು ಅರಿವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರು ಶ್ರೀಮತಿ ಸುಮಂಗಲಾ ಬಿ. ಪಾಟೀಲ, ಐಕ್ಯೂಎಸಿ ಸಂಯೋಜಕರಾದ ಡಾ. ಸಿದ್ದೇಶ್ ಎಂ.ಬಿ ಸಮಾಜಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾದೇವಿ ಎನ್ ಉಪ್ಪಾರ ಹಾಗೂ ಉಪನ್ಯಾಸಕಿ ಪ್ರಿಯಾಂಕಾ ಬಿ. ವಿದ್ಯಾರ್ಥಿ ಕಾರ್ಯದರ್ಶಿ ನಂದಿನಿ ಏಕಬೋಟೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























