Home ಜಿಲ್ಲೆ ವೈಭವದ ವೀರಭದ್ರೇಶ್ವರ ಪಲ್ಲಕ್ಕಿ,ಬೆಳ್ಳಿ ಉತ್ಸವ ಮೂರ್ತಿ ಮೆರವಣಿಗೆ

ವೈಭವದ ವೀರಭದ್ರೇಶ್ವರ ಪಲ್ಲಕ್ಕಿ,ಬೆಳ್ಳಿ ಉತ್ಸವ ಮೂರ್ತಿ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾದಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರೇಶ್ವರ ಬೆಳ್ಳಿ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಮಂಗಳವಾರರಂದು ಪಟ್ಟಣದ ತಂಗಡಗಿ ಕೃಷ್ಣಾ ನದಿಯಿಂದ ಭವ್ಯ ಮೆರವಣಿಗೆಯು ಗಂಗಸ್ಥಳಕ್ಕೆ ಹೋಗಿ ನಂತರ ಪಿಲೇಕೆಮ್ಮ ದೇವಸ್ಥಾನದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಬಜಾರ್‍ದಲ್ಲಿ ಹಾಯ್ದು ಸರಾಫ್ ಬಜಾರದಿಂದ ಕಿಲ್ಲಾದ ದೇವಸ್ಥಾನಕ್ಕೆ ತೆರಳಿತು.
ಈ ಭವ್ಯ ಮೆರವಣಿಗೆಯಲ್ಲಿ ಬೊಂಬೆ ಕುಣಿತ, ಕರಡಿ ಮಜಲು, ಸಕಲ ವಾದ್ಯ ವೈಭವಗಳೊಂದಿಗೆ ಪುರವಂತರ ಸೇವೆಯೊಂದಿಗೆ ವೀರಭದ್ರೇಶ್ವರ ಪಲ್ಲಕ್ಕಿ ಮಹಾ ಉತ್ಸವವು ಜರುಗಿತು.
ಮೆರವಣಿಗೆಯಲ್ಲಿ ಪುರವಂತರು, ವೀರಭದ್ರೇಶ್ವರ ದೇವಸ್ಥಾನದ ಸಮಸ್ತ ದೈವ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ಮದ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರುಗಿತು. ಸಾಯಂಕಾಲ ದೇವಸ್ಥಾನದ ಕಳಸವನ್ನು ಶಿಖರಕ್ಕೇರಿಸಲಾಯತು.