
ಲಕ್ಷೆ÷್ಮÃಶ್ವರ,ಸೆ೧: ತಾಲೂಕಿನ ಮಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ನಳ್ಳಿ ಗ್ರಾಮದಲ್ಲಿ ಸದಾ ಸೋರುತ್ತಿದ್ದ ಪೈಪ್ ಲೈನ್ ದುರಸ್ತಿಗಾಗಿ ತೆಗೆದ ಗುಂಡಿಯನ್ನು ವರ್ಷ ಕಳೆದರೂ ಗ್ರಾಮ ಪಂಚಾಯಿತಿಯ ವರು ಮುಚ್ಚದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಯತ್ನಳ್ಳಿ ಗ್ರಾಮದ ಪ್ರಭುಗೌಡ ಸುರಣಿಗಿ ಅವರ ಮನೆಯ ಎದುರುಗಡೆಯೇ ತೆಗೆದ ಆಳವಾದ ಗುಂಡಿಯನ್ನು ಕಳೆದ ಒಂದು ವರ್ಷದಿಂದಲೂ ಮುಚ್ಚಲು ಗ್ರಾಮ ಪಂಚಾಯಿತಿಯವರು ಮೀನಾ ಮೇಷ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನಜಾನುವಾರುಗಳು ಸದಾ ಅಡ್ಡಾಡುವ ಈ ರಸ್ತೆಯ ಬದಿ ತೋಡಿರುವ ಗುಂಡಿಯನ್ನು ಗ್ರಾಮ ಪಂಚಾಯತಿಯವರು ಮುಚ್ಚುವರೇ ಎಂಬುದನ್ನು ಕಾದು ನೋಡಬೇಕಷ್ಟೆ ಅನಾಹುತಕ್ಕಿಂತ ಮುಂಚೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.































