
ಬೆಂಗಳೂರು, ಆ.31: ಉದ್ಯಾನನಗರಿ ಬೆಂಗಳೂರಿನ ಹೊರವಲಯದಲ್ಲಿ ಸ್ವಂತ ಮನೆ ನಿರ್ಮಾಣ ಹಾಗೂ ಸುರಕ್ಷಿತ ಹೂಡಿಕೆಯ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿಯಾಗಿದೆ.
ನೆಲಮಂಗಲ ಸಮೀಪ ಜುವಾರಿ ಇನ್ಫ್ರಾವಲ್ರ್ಡ್, SSಏ ಮತ್ತು ಂಖSಅಊ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ `ಜುವಾರಿ ಕೈನೆಟಿಕ್ಸ್ ಪ್ರೀಮಿಯಂ ವಿಲ್ಲಾ ಪ್ಲಾಟ್ಗಳು’ ಯೋಜನೆಯನ್ನು ಸಾರ್ವಜನಿಕರಿಗಾಗಿ ಲೋಕಾರ್ಪಣೆಗೊಳಿಸಲಾಯಿತು.
ಯೋಜನೆಯಲ್ಲಿ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಶಾಲವಾದ ಪ್ರೀಮಿಯಂ ನಿವೇಶನಗಳು, ಅಗಲವಾದ ಕಾಂಕ್ರೀಟ್/ಅಸ್ಫಾಲ್ಟ್ ರಸ್ತೆಗಳು, ಭೂಗತ ವಿದ್ಯುತ್ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, 24×7 ಭದ್ರತಾ ವ್ಯವಸ್ಥೆ, ಕ್ಲಬ್ಹೌಸ್, ಈಜುಕೊಳ, ಮಕ್ಕಳ ಆಟದ ಮೈದಾನ ಹಾಗೂ ಸುಂದರವಾಗಿ ಅಭಿವೃದ್ಧಿಪಡಿಸಲಾದ ಉದ್ಯಾನವನಗಳು ಯೋಜನೆಯ ಪ್ರಮುಖ ಆಕರ್ಷಣೆಗಳಾಗಿವೆ. ಎಲ್ಲಾ ವಯೋಮಾನದವರ ಆರೋಗ್ಯ ಮತ್ತು ಮನರಂಜನೆಗೆ ಆದ್ಯತೆ ನೀಡಲಾಗಿದ್ದು, ಫುಟ್ಬಾಲ್, ಕ್ರಿಕೆಟ್, ಬಾಲ್ ರೈಡಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸೂಕ್ತವಾದ ಆಟದ ಮೈದಾನಗಳನ್ನು ನಿರ್ಮಿಸಲಾಗಿದೆ. ಇದರಿಂದ ನಿವಾಸಿಗಳಲ್ಲಿ ಕ್ರೀಡಾ ಚಟುವಟಿಕೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ದೊರೆಯಲಿದೆ.
ನೆಲಮಂಗಲದ ಸಮೀಪದಲ್ಲಿರುವ ಈ ಯೋಜನೆಯು ಪ್ರಮುಖ ಹೆದ್ದಾರಿಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ವಾಣಿಜ್ಯ ಕೇಂದ್ರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದು, ನಗರ ಪ್ರದೇಶದ ಸೌಲಭ್ಯಗಳೊಂದಿಗೆ ನೆಮ್ಮದಿಯ ವಾತಾವರಣದಲ್ಲಿ ವಾಸಿಸಲು ಅನುಕೂಲ ಕಲ್ಪಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಶಿಕುಮಾರ್, “ಸುರಕ್ಷಿತ ಹೂಡಿಕೆ ಹಾಗೂ ಉಜ್ವಲ ಭವಿಷ್ಯವನ್ನು ಬಯಸುವವರು ತಮ್ಮದೇ ಆದ ನಿವೇಶನವನ್ನು ಹೊಂದುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಆಸ್ತಿ ಹಾಗೂ ವಿಶಿಷ್ಟ ಪರಂಪರೆಯನ್ನು ನಿರ್ಮಿಸಿಕೊಳ್ಳಬಹುದು. ಜುವಾರಿ ಕೈನೆಟಿಕ್ಸ್ ಪ್ರೀಮಿಯಂ ವಿಲ್ಲಾ ಪ್ಲಾಟ್ಗಳು ಗ್ರಾಹಕರಿಗೆ ಗುಣಮಟ್ಟದ ಮೂಲಸೌಕರ್ಯ ಮತ್ತು ಉತ್ತಮ ಜೀವನಶೈಲಿಯ ಅನುಭವ ನೀಡುವ ಉದ್ದೇಶದಿಂದ ರೂಪಿಸಲಾಗಿದೆ,” ಎಂದು ತಿಳಿಸಿದರು.

































