
ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್ ಎಸ್ ಎಸ್ ನ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಾ. ಮಹಾದೇವಿ ಮೇಡಮ್ ಅವರು ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಏಡ್ಸ್ ಎನ್ನುವ ಮಾರಕ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಉದ್ಘಾಟಕರಾಗಿ ಮಾತನಾಡಿದ ಡಾ. ಸಂಜಯ ವೈದ್ಯಾಧಿಕಾರಿಗಳು ಏಡ್ಸ್ ರೋಗ ಬರಲು ಮುಖ್ಯ ಕಾರಣಗಳು ಅದಕ್ಕೆ ಇರುವ ಪರಿಹಾರೋಪಾಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಏಡ್ಸ್ ಬಗ್ಗೆ ಜಾಗೃತಿ ಅರಿವು ಮೂಡಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಶಾಂತಾ ಬಿ ಅಸ್ಟಿಗೆ ಮೇಡಮ್ ಅವರು ವಿದ್ಯಾರ್ಥಿಗಳಿಗೆ ಏಡ್ಸ್ ರೋಗದ ಪರಿಣಾಮಗಳ ಬಗ್ಗೆ ಹಾಗೂ ಏಡ್ಸ್ ರೋಗಿ ಯನ್ನು ಗೌರವದಿಂದ ಕಾಣುವಂತೆ ಕಿವಿಮಾತು ಹೇಳಿದರು. ಸಿಬ್ಬಂದಿ ಕಾರ್ಯದರ್ಶಿಗಳು ಆಗಿರುವ ಡಾ. ಸಂತೋಷ್ ಕುಮಾರ್ ರವರು ಮಾತನಾಡಿದರು ಕಾರ್ಯಕ್ರಮವನ್ನು ಶ್ರೀ ಭೀಮಣ್ಣ ನಿರೂಪಿಸಿದರು ಡಾ. ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು ಕು. ಅಪರ್ಣ ಸ್ವಾಗತಿಸಿದ್ದರು ಡಾ. ಶಿವಕುಮಾರ್ ವಂದನಾರ್ಪಣೆ ಮಾಡಿದರು.































