Home ಜಿಲ್ಲೆ ಕಲಬುರಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಆಹಾರ ಇತರೆ ಸಾಮಗ್ರಿಗಳ ಪೂರೈಕೆಯಲ್ಲಿ ಅಕ್ರಮ: ಜೈಕನ್ನಡಿಗರ ಸೇನೆ ಆರೋಪ

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಆಹಾರ ಇತರೆ ಸಾಮಗ್ರಿಗಳ ಪೂರೈಕೆಯಲ್ಲಿ ಅಕ್ರಮ: ಜೈಕನ್ನಡಿಗರ ಸೇನೆ ಆರೋಪ

ಕಲಬುರಗಿ: ಜಿಲ್ಲೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡುವ ಟೆಂಡರ್ ಸಂಬಂಧಿಸಿದಂತೆ, ಟೆಂಡರ್ ಷರತ್ತುಗಳ ಉಲ್ಲಂಘನೆ ಮಾಡಿರುತ್ತಾರೆ. ಈ ಅಕ್ರಮ ವ್ಯವಹಾರದ ಕುರಿತು ಕ್ರಮ ಜರುಗಿಸದೆ ಅಧಿಕಾರದ ದುರುಪಯೋಗ ಮಾಡಿಕೊಂಡಿರುವ ಕಲಬುರಗಿ ಉಪ ನಿರ್ದೇಶಕರು ಆಹಾರ ಸರಬರಾಜು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿ ಅವ್ಯವಹಾರ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಜೈಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ದತ್ತು ಎಚ್.ಭಾಸಗಿ ಅವರು ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿಯಮಗಳ ಪ್ರಕಾರ ಟೆಂಡರದಾರರು ಯಾವುದೇ ವಸತಿನಿಲಯಗಳಿಗೆ ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳು 2ನೇ ತಾರಿಕು ಒಳಗಾಗಿ ನಿಲಯಗಳಿಗೆ ಸರಬರಾಜು ಮಾಡಬೇಕು ಆದರೆ ಸರಿಯಾಗಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡದೆ ಪ್ರತಿ ತಿಂಗಳು ಬೋಗಸ್ ಬಿಲ್ ಮಾಡಿಕೊಂಡು ಸರಕಾರಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿ ಇವರ ಮೇಲೆ ಕಾನೂನು ಕ್ರಮಕೈಗೊಂಡು ಉನ್ನತ ಮಟ್ಟದ ತನಿಖೆ ಮಾಡಲು ಆಗ್ರಹಿಸಲಾಗಿದೆ.
ಆದರೆ ಶ್ರೀ ಸೌರಿ ರಾಜನ್ ಕೆ (ಸಿ.ಜಿ.ಇ.ಸಿ.ಸಿ.ಎಸ್.ಎಲ್. ಕೇಂದ್ರೀಯ ಭಂಡಾರ್) ಗುತ್ತಿಗೆದಾರರು ತಮ್ಮ ಕಛೇರಿಗೆ ಬಿಲ್ ಪಾವತಿ ಮಾಡುವಂತೆ ದಾಖಲೆಗಳನ್ನು ನೀಡಿರುತ್ತಾರೆ. ಆದ್ದರಿಂದ ಸದರಿ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧದ ದೂರು ಮುಕ್ತಾಯವಾಗುವವರೆಗೆ ಸದರಿ ಗುತ್ತಿಗೆದಾರರ ಬಿಲ್ ಪಾವತಿ ಮಾಡಬಾರದು. ಒಂದು ವೇಳೆ ಇವರಿಗೆ ಬಿಲ್ ಪಾವತಿ ಮಾಡಿದರೆ ಮುಂದಿನ ಆಗುಹೋಗುಗಳಿಗೆ ತಾವುಗಳೇ ನೇರ ಹೊಣೆಗಾರರಾಗುತ್ತೀರಿ ಎಂಬುದನ್ನು ದೂರಿನಲ್ಲಿ ಎಚ್ಚರಿಸಲಾಗಿದೆ.