ಕಲಬುರಗಿ : ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ 14ನೇ ಪದವಿಪ್ರದಾನ ಸಮಾರಂಭ ಇಂದು ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೇಂದ್ರ ( ಸ್ಯಾಕ್ ) ಕಟ್ಟಡದ ಪಿ.ಡಿ.ಎ. ಸಭಾಂಗಣದಲ್ಲಿ ಜರುಗಿತು.ಕೆಕೆಆರ್‍ಡಿಬಿ ಕಾರ್ಯದರ್ಶಿ ನಳಿನಿ ಅತುಲ್,ಬೆಂಗಳೂರಿನ ಸಮ್ಮಿಟ್ ಕನ್ಸಲ್ಟಿಂಗ್ಸ್‍ನ ಸಿಇಒ ಹಾಗೂ ಪಿ.ಡಿ.ಎ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಂದೀಪ್ ಶರ್ಮಾ ,ಹೆಚ್.ಕೆ.ಇ. ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ, ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಎಸ್.ಚಿಂಚೋಳಿ,ಅರುಣ್‍ಕುಮಾರ್ ಎಂ. ಪಾಟೀಲ್,ಡಾ. ಎಸ್.ಆರ್. ಹರವಾಳ, ಡಾ. ಅನಿಲ್‍ಕುಮಾರ್ ಬಿ. ಪಟ್ಟಣ್, ಡಾ.ಕಿರಣ ದೇಶಮುಖ,ಡಾ. ಎಸ್.ಆರ್. ಪಾಟೀಲ್, ಡಾ. ಎಸ್.ಆರ್. ಹೊಟ್ಟಿ, ಡಾ. ಭಾರತಿ ಹರಸೂರ, ಡಾ. ವಿಜಯ್ ಹಿರೇಮಠ ಸೇರಿದಂತೆ ಹಲವರಿದ್ದರು.ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಅಬ್ದುಲ್ಲಾ ದಾನಿಶ್ ಅತಿ ಹೆಚ್ಚು 7 ಚಿನ್ನದ ಪದಕಗಳನ್ನು ಪಡೆದು ಸಂಭ್ರಮಿಸಿದರು.