Home ಜಿಲ್ಲೆ ಶ್ರೀ ನುಲಿಯ ಚಂದಯ್ಯನವರ ಜಯಂತಿ

ಶ್ರೀ ನುಲಿಯ ಚಂದಯ್ಯನವರ ಜಯಂತಿ

ಲಕ್ಷೆ÷್ಮÃಶ್ವರ,ಆ ೨೯: ೧೨ನೇ ಶತಮಾನದ ಸಮಕಾಲಿನ ಶರಣರಲ್ಲಿ ಒಬ್ಬರಾದ ನುಲಿಯ ಚಂದಯ್ಯ ಕಾಯಕವೇ ಕೈಲಾಸ ತತ್ವಕ್ಕೆ ಜೀವ ತುಂಬಿ ಮೆದೆ ಹುಲ್ಲಿನ ಹಗ್ಗ ಹೊಸದು ಜಂಗಮ ದಾಸೋಹಕ್ಕೆ ಅರ್ಪಿಸಿದ ಮಹಾನ್ ವಚನಕಾರ ಕವಿ ಎಂದು ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಹೇಳಿದರು.


ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನುಲಿಯ ಚಂದಯ್ಯ ನವರ ಜಯಂತಿ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಮಾತನಾಡಿ ಇಡೀ ಕನ್ನಡ ಸಾಹಿತ್ಯದಲ್ಲಿ ಅತಿ ಮುಖ್ಯ ಹಾಗೂ ಅಪರೂಪದ ಅಭಿವ್ಯಕ್ತಿ ಎಂದರೆ ಅದು ವಚನ ಸಾಹಿತ್ಯ.ಈ ವಚನ ಸಾಹಿತ್ಯವನ್ನು ಬೆಳೆಸಿದವರು ನುಲಿಯ ಚಂದಯ್ಯ ಎಂದು ಹೇಳಿದರು.


ಉತ್ತರ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ, ದಕ್ಷಿಣ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಚ್ ಡಿ ನಿಂಗರೆಡ್ಡಿ, ಆರ್ ಕೆ ಉಪನಾಳ, ಆರ್ ಎಂ ಶಿರಹಟ್ಟಿ, ಎಲ್ ಎ ಬಣಕಾರ, ಪ್ರಶಿಕ್ಷಣಾರ್ಥಿ ಗೌರಮ್ಮ ಮಜ್ಜಿಗುಡ್ಡ ಹಾಗೂ ಶಿವರಾಜ ಸಜ್ಜನರ, ಮುದ್ದು ಮಕ್ಕಳು ಉಪಸ್ಥಿತರಿದ್ದರು.