
ರಬಕವಿ-ಬನಹಟ್ಟಿ,ಆ.೨೮: ಪ್ರತಿ ವರ್ಷದಂತೆ ಈ ವರ್ಷವೂ ರಬಕವಿಯ ಶ್ರೀಮಲ್ಲಿಕಾರ್ಜುನ ದೇವರ ಜಾತ್ರೆಯು ದಿ.೩೧ರ ಶ್ರಾವಣದ ೩ನೇ ಸೋಮವಾರದಂದು ೮ ದಿನಗಳ ಕಾಲ ಜರುಗಲಿದೆಯೆಂದು ಅಧ್ಯಕ್ಷ ಶ್ರೀ ಶಂಕರಲಿAಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ ಹೇಳಿದರು.
ಸೋಮವಾರ ದಿ.೩೧ ರಂದು ಬೆಳಿಗ್ಗೆ ಶ್ರೀಭೃಮರಾಂಭದೇವಿ ಹಾಗೂ ಶ್ರೀಮಲ್ಲಿಕಾರ್ಜುನ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ ಸಹಿತ ಪೂಜೆ ನಡೆಯುವವು. ಮಧ್ಯಾಹ್ನ ೪ಕ್ಕೆ ಶ್ರೀಶಂಕರಲಿAಗ ದೇವಸ್ಥಾನದಲ್ಲಿ ಕರಡಿ ಮಜಲು ಪ್ರದರ್ಶನ ನಡೆಯುತ್ತವೆ. ರಥದ ಕಳಸವನ್ನು ಶ್ರೀಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆಗೆದುಕೊಂಡು ಪೂಜೆ ಸಲ್ಲಿಸಿದ ಬಳಿಕ ಕಳಸಾರೋಹಣ ನೆರವೇರಿಸಲಾಗುವುದು. ಮಹಾಲಿಂಗಪುರ ಶ್ರೀಮಹಾಲಿಂಗೇಶ್ವರ ಮತ್ತು ಶ್ರೀಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಗಳನ್ನು ಶ್ರೀರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ರಥೋತ್ಸವ ಜರುಗುವುದು. ರಾತ್ರಿ ೧೦ಕ್ಕೆ ಶ್ರೀಮಲ್ಲಿಕಾರ್ಜನ ನಾಟ್ಯ ಸಂಘ ಮತ್ತು ಶ್ರೀಬ್ರಹ್ಮಾನಂದ ನಾಟ್ಯಸಂಘಗಳ ನಾಟಕ ಪ್ರದರ್ಶನ ಜರುಗುವುದು.
ಮಂಗಳವಾರ ಸೆ.೧ ರಂದು ಮುಂಜಾನೆ ೧೦ರಿಂದ ೩ರ ವರೆಗೆ ಅನ್ನಸಂತರ್ಪಣೆ ನಡೆಯುವುದು. ೨೫೦ಕ್ಕೂ ಅಧಿಕ ಪಲ್ಲಕ್ಕಿಗಳೊಡನೆ ಬಂದ ಯಾತ್ರಿಕರಿಗೆ ಬಸವರಾಜ ದಲಾಲ ಹಾಗೂ ಜಯಪ್ರಕಾಶ ಸೊಲ್ಲಾಪುರ ಉಪಹಾರ ವ್ಯವಸ್ಥೆ ಮಾಡಿದ್ದಾರೆ. ಸಂಜೆ ೪ ರಿಂದ ರಾಷ್ಟಂಮಟ್ಟದ ಜಂಗಿ ಇಕಾಲಿ ಕುಸ್ತಿ ಪಂದ್ಯಗಳು ಜರುಗಲಿವೆ. ರಾತ್ರಿ ೧೦ಕ್ಕೆ ನಾಟಕ ಪ್ರದರ್ಶನ ನಡೆಯುವುದು. ಬುಧವಾರ ಮುಂಜಾನೆ ೧೦ಕ್ಕೆ ಟ್ರಸ್ಟ್ ಆಡಳಿತ ಮಂಡಳಿಯಿAದ ಕೃಷ್ಣಾ ನದಿಗೆ ಬಾಗಿನ ಸಮರ್ಪಣೆ, ಸಂಜೆ ೬ಕ್ಕೆ ಕಳಸ ಇಳಿಸುವುದು ಮತ್ತು ಕರಡಿ ಮಜಲು ಕಾರ್ಯಕ್ರಮ ಜರುಗಲಿವೆ.
ಪ್ರಭು ಉಮದಿ, ಮಾರುತಿ ನಾಯಕ, ಸಂಗಮೇಶ ಹತ್ತಪಕಿ, ಬಿಮಶಿ ಪಾಟೀಲ, ಶ್ರೀಶೈಲ ತೇಲಿ, ಬಸವರಾಜ ದಲಾಲ, ಶಿವಾನಂದ ಹೊಸಮನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.






























