ಸಂಜೆವಾಣಿ ವಾರ್ತೆ
ಮೇಲುಕೋಟೆ:ಆ.24:- ಬಳಿಘಟ್ಟ ಏತನೀರಾವರಿ ಯೋಜನೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ಇಲ್ಲದಿದ್ದರೆ ಅನುಷ್ಠಾನವಾಗುತ್ತಿರಲಿಲ್ಲ ಎಂದು ಕೇಂದ್ರ ಭಾರಿಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಮೇಲುಕೋಟೆ ಹೋಬಳಿಯ ಬಳಿಘಟ್ಟಗ್ರಾಮದಲ್ಲಿ ಮಾರಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಳೆಯಾಶ್ರಿತ ಪ್ರದೇಶವಾದ ಮೇಲುಕೋಟೆಯ ಬಳಿಘಟ್ಟಭಾಗದ ಹಳ್ಳಿಗಳ ರೈತರು ಸಂಕಷ್ಠವನ್ನು ಪರಿಹರಿಸಲು ಏತನೀರಾವರಿಯೋಜನೆ ಅನುಷ್ಟಾನಗೊಳಿಸಿದ್ದಾರೆ. ಬಳಘಟ್ಟ ಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು ಕಾವೇರಿ ನೀರನ್ನೇ ತಂದು ಏತನೀರಾವರಿ ಸೌಲಭ್ಯ ನೀಡಿದ್ದಾರೆ.
ಈ ಭಾಗದ ಕೆರೆಕಟ್ಟೆಗಳು ತುಂಬವಂತೆ ಮಾಡಿ ರೈತರ ಸಂಕಷ್ಠಬಗೆಹರಿಸಿದ್ದಾರೆ ಅಭಿವೃದ್ಧಿ ಎಂದರೆ ಪುಟ್ಟರಾಜು ಪುಟ್ಟರಾಜು ಎಂದರೆ ಅಭಿವೃದ್ಧಿ ಎಂಬುದನ್ನು ಮಾಡಿ ತೋರಿಸಿದ್ದಾರೆ ಕ್ಷೇತ್ರದಾದ್ಯಂತ ಉತ್ತಮರಸ್ತೆ ನಿರ್ಮಿಸಿದ್ದಾರೆ.
ದೂರದೃಷ್ಟಿಯಿಂದ ಕೂಡಿದ ಪ್ರಗತಿಪರವಾದ ಯೋಜನೆಗಳ ಅನುಷ್ಟಾನವನ್ನು ಮಾಡಿದ್ದಾರೆ. ಅಧಿಕಾರದಲ್ಲಿದ್ದರೂ ಪ್ರತಿದಿನ ಮೇಲುಕೋಟೆ ಕ್ಷೇತ್ರದ ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆ ನಾನು ಮುಖ್ಯಮಂತ್ರಿ ಆಗುತ್ತೇನೋ ಇಲ್ಲವೋ ಆದರೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಪುಟ್ಟರಾಜು ಕೈಬಿಡದೆ ಬೆಂಬಲಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ರೈತರಿಗೆ ಬತ್ತನಾಟಿಮಾಡಬಾರದು ಎಂದು ಸೂಚನೆ ಸರ್ಕಾರ ನೀಡಿರುವುದು ದುರದೃಷ್ಠಕರ ಬೆಳವಣಿಗೆಯಾಗಿದೆ ಇಲ್ಲಿಯ ರೈತರೇ ಬೆಳೆಗಳಿಗೆ ನೀರಿಲ್ಲ ಎನ್ನುತ್ತಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ.
ನಾವು ಈ ಬಗ್ಗೆ ಮೊದಲೇ ಸಲಹೆ ನೀಡಿದ್ದರೂ ರಾಜ್ಯಸರ್ಕಾರ ಗಮನನೀಡಿಲ್ಲ 120 ವಿಧಾನಕ್ಷೇತ್ರಗಳಲ್ಲಿ ಬರಗಾಲವಿದೆ. ರಾಜ್ಯದ ರೈತರ ಸಂಕಷ್ಠ ಪರಿಹರಿಸಲು ವಿಶೇಷ ಕಾರ್ಯಯೋಜನೆ ರೂಪಿಸಲು ಸಲಹೆ ನೀಡಿದ್ದೇನೆ ಕಬ್ಬುಬೆಳೆಗಾರರರಿಗೆ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ.
ಗ್ಯಾರಂಜಿ ಕಾರ್ಯಕ್ರಮದಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಹಳ್ಳಿಗಾಡಿನ ಬದುಕಿನ ಚಿತ್ರಣ ಬದಲಾಗುವುದಿಲ್ಲ. ರೈತರ ಸಂಕಷ್ಟ ಪರಿಹಾರಕಾಣುವುದಿಲ್ಲ ಹೀಗಾಗಿ 20ವರ್ಷ ಮುಂದಿನ ಭವಿಷ್ಯಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕಾಗಿದೆ ಇದನ್ನು ರಾಜ್ಯದ ಜನತೆ ಮನಗಾನಬೇಕು ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಸಿಎಸ್.ಪುಟ್ಟರಾಜು ಮಾತನಾಡಿ ಹೊಸಕೆರೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಕಿಡಿಕಾರಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದವೇಳೆ ಏತನಿರಾವರಿ ಯೋಜನೆ ನೀಡಿದ್ದಾರೆ. ಕೆರೆಯ ಏರಿಯನ್ನು ಎತ್ತರಿಸಿ ನೀರಾವರಿ ಪ್ರದೇಶವನ್ನು ವಿಸ್ತರಿಸುವ ಬದಲು ಅವೈಜ್ಞಾನಿಕವಾದ ಕಾಮಗಾರಿ ಮಾಡಲಾಗುತ್ತಿದ್ದಾರೆ.
ನಾವು ಇದಕ್ಕೆ ಅಡ್ಡಿಪಡಿಸುವುದಿಲ್ಲ ಮುಂದಾಲೋಚನೆ ಇಲ್ಲದ ಕಾಮಗಾರಿ ಮಾಡಲಿ ಇದರಿಂದ ಕದಲಗೆರೆಭಾಗದ ಮತ್ತು ಸುತ್ತಮುತ್ತಲ ಹಳ್ಳಿಗಳ ರೈತರು ಸಂಕಷ್ಠ ಎದುರಿಸಬೇಕಾಗುತ್ತದೆ ಕಾರ್ಯಕ್ರಮಕ್ಕೂ ಮುನ್ನ ಮೇಲುಕೋಟೆ ಭಾಗದ ಕೆರೆಗಳಿಗೆ ನೀರುತುಂಬಿಸಲು ಸಿಎಸ್ಪುಟ್ಟರಾಜು ಸಚಿವರಾಗಿದ್ದವೇಳೆ ಪ್ರಪ್ರಥಮವಾಗಿ ಕಾವೇರಿನೀರು ತುಂಬಿಸಿದ ಐತಿಹಾಸಿಕ ದಳವಾಯಿಕೆರೆಗೆ ಕೇಂದ್ರಸಚಿವ ಹೆಚ್.ಡಿ ಕುಮಾರಸ್ವಾಮಿ ಪೂಜೆಸಲ್ಲಿಸಿದರು ಈ ವೇಳೆ ಸಿಎಸ್ ಪುಟ್ಟರಾಜು ಮನ್ ಮುಲ್ ನಿರ್ದೇಶಕ ಕುಮಾರ್ ಇತರರು ಭಾಗವಹಿಸಿದ್ದರು


























