Home ಜಿಲ್ಲೆ ಕಲಬುರಗಿ ಕರ್ತವ್ಯಲೋಪ: ಇಬ್ಬರು ಪೊಲೀಸರ ಅಮಾನತು

ಕರ್ತವ್ಯಲೋಪ: ಇಬ್ಬರು ಪೊಲೀಸರ ಅಮಾನತು

ಕಲಬುರಗಿ,ಆ.20-ನಗರದ ಅಶೋಕ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ನಂತರ ಕೊಲೆ ಪ್ರಕರಣ ದಾಖಲಾಗಿದ್ದು, ಈ ಕೊಲೆ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಕರ್ತವ್ಯ ಲೋಪವೆಸಗಿದ ಠಾಣೆಯ ಪೊಲೀಸ್ ಕಾನ್ಸಟೇಬಲ್‍ಗಳಾದ ನೀಲಕಂಠ ಪಾಟೀಲ್ ಹಾಗೂ ಚಂದ್ರಶೇಖರ್ ಅವರ ವಿರುದ್ಧ ಪೆÇಲೀಸ್ ಆಯುಕ್ತರು ಇಲಾಖಾ ಶಿಸ್ತಿನ ಕ್ರಮ ಬಾಕಿಯಲ್ಲಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.