
ಕಲಬುರಗಿ,ಆ.20-ಹಿರಿಯ ಕವಿಗಳ ಕಾವ್ಯವನ್ನು ನಿರಂತರವಾಗಿ ಓದುವುದರ ಮೂಲಕ ಯುವ ಬರಹಗಾರರ ಕಾವ್ಯ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದು ನಾಡಿನ ಹಿರಿಯ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಹೇಳಿದರು.
ಕಲ್ಬುರ್ಗಿ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿ ಸಮ್ಮೇಳನ , ಸಂಗೀತ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯುವ ಸಾಹಿತಿಗಳು ತಾವು ಬರೆದ ಕವನಗಳನ್ನು ಇನ್ನೊಬ್ಬರಿಗೆ ತೋರಿಸಿ ತಿದ್ದಿಸಿಕೊಂಡರೆ ಕಾವ್ಯ ಶುದ್ಧವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ.ವಿಜಯಕುಮಾರ್ ಪರುತೆ ಅವರು ಮಾತನಾಡುತ್ತ ಇಲ್ಲಿ ಅನೇಕ ಕವಿಗಳು ಉತ್ತಮ ರೀತಿಯಲ್ಲಿ ಕವನ ವಾಚನ ಮಾಡಿದರು. ಕವಿ ಸಮ್ಮೇಳನ ತುಂಬಾ ಅದ್ಭುತವಾಗಿ ನಡೆದು ಬಂತು ಎಂದು ಹೇಳಿದರು.
ಶಿವಾನಂದ ಖಜುಗಿ9 ಅವರು ಬಿ ಎಚ್ ನಿರಗುಡಿ ಅವರು ಬರೆದ ಸೂಫಿಸಂತ ಬಂದೇ ನವಾಜರ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಿಂತಕ ಪೆÇ್ರ.ಯಶ್ವಂತರಾಯ ಅಷ್ಟಗಿ ,ಸಂಘಟಕ ಶರಣಗೌಡ ಪಾಟೀಲ್ ಪಾಳಾ, ಸುಮಾಜ ಸೇವಕರಾದ ನೀಲಕಂಠ ಜಮಾದಾರ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು.
ಕವಿ ಸಮ್ಮೇಳನದಲ್ಲಿ ಕವಿಗಳು: ಚಾಮರಾಜ ದೊಡ್ಡಮನಿ, ಮಾಲಾ ಕಣ್ಣಿ, ರಾಜೇಂದ್ರ ಝಳಕಿ ,ಡಾ ಪರ್ವೀನ್ ಸುಲ್ತಾನಾ, ಪರಮಾನಂದ ಸರಸಂಬಿ ,ಬಾಬು ಜಾಧವ್ ,ರೇವಣಸಿದ್ದಪ್ಪ ದುಖಾನ್, ಗೋದಾವರಿ ಪಡಶೆಟ್ಟಿ ,ಮಂಜುಳಾ ಪಾಟೀಲ್, ಪಲ್ಲವಿ ಕುಲಕರ್ಣಿ, ಸುನಿತಾ ಮುಲಗೆ, ಶ್ರೀಶೈಲ ಮದಾನೆ ಮುಂತಾದವರು ಕವನ ವಾಚನ ಮಾಡಿದರು.
ಸಂಗೀತ ಸಂಭ್ರಮದಲ್ಲಿ ಜನಪ್ರಿಯ ಕಲಾವಿದರು ಅಣ್ಣಾರಾಯ ಮತ್ತಿಮೂಡ, ಬಾಬುರಾವ ಕೋಬಾಳ್, ಸೂರ್ಯಕಾಂತ್ ಪೂಜಾರಿ, ಸೈದಪ್ಪ ಸಪ್ಪನಗೋಳ, ಬಸಯ್ಯಾ ಗುತ್ತೇದಾರ್, ಸೂರ್ಯಕಾಂತ ಹೊಳೇಅವರಾದ ಮುಂತಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು
ವೀರಭದ್ರಯ್ಯ ಸ್ಥಾವರಮಠ, ಮೌನೇಶ್ ಪಂಚಾಳ ವಾದ್ಯ ಸಹಕಾರ ನೀಡಿದರು. ಕುಮಾರಿ ಸುಮನ್ ಮಳಕೇಡಕರ್ ಭರತನಾಟ್ಯ ಮಾಡಿದರು.





























