
ಔರಾದ್ : ಬೀದರ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ರವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ತಾಲೂಕಿನ ಖಂಡಿಕೇರಿ ಗ್ರಾಮದ ಹೊಲದಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಮಾಹಿತಿಯಂತೆ ಔರಾದ ಪೆÇಲೀಸ್ ಸಿಬ್ಬಂದಿ ಹೊಲಕ್ಕೆ ಹೋಗಿ ಹೊಲದಲ್ಲಿ ಬೆಳೆದ 100 ಹಸಿ ಗಾಂಜಾ ಗಿಡಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿತರನ್ನು ಬಂಧಿಸಿದ್ದಾರೆ.
ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು-1 ಬೀದರ ಶ್ರೀ ಬಲ್ಲಪ್ಪ ನಂದಗಾಂವಿ, ಪೆÇಲೀಸ್ ಉಪಾಧೀಕ್ಷಕರು, ಭಾಲ್ಕಿ ಉಪ-ವಿಭಾಗ ಭಾಲ್ಕಿ, ರವರ ಮುಂದಾಳತ್ವದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್‍ಐ ವಸೀಮ್ ಪಟೇಲ್, ರೇಣುಕಾ ಭಾಲೆಕರ್, ಹರಿಶಕುಮಾರ, ಜ್ಞಾನೇಶ್ವರ, ಅರುಣ, ಸಂಜುಕುಮಾರ, ಯೋಗೇಶ, ಶ್ರೀ ಗೌತಮ, ಶ್ರೀಕಾಂತ ರೆಡ್ಡಿ ರವರೊಂದಿಗೆ ಪತ್ರಾಂಕಿತ ಅಧಿಕಾರಿ ತಹಸೀಲ್ದಾರ ಮಹೇಶ ಪಾಟೀಲ ರವರ ಸಮಕ್ಷಮದಲ್ಲಿ ಕಿತ್ತು ಅದರ ತೂಕ 60 ಕೆ.ಜಿ 430 ಗ್ರಾಂ ನಷ್ಟಿದ್ದು, ಅ:ಕಿ: 30,21,500=00 ರೂಪಾಯಿ ಮೌಲ್ಯ ಬೆಲೆ ಬಾಳುವುಗಳನ್ನು ಮತ್ತು ಆರೋಪಿತನನ್ನು ವಶಕ್ಕೆ ಪಡೆದು ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಔರಾದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ಹೊಲದಲ್ಲಿ ಬೆಳೆದಿರುವ ಗಾಂಜಾ ಗಿಡವನ್ನು ಪತ್ತೆ ಮಾಡಿ ದಾಳಿಯಲ್ಲಿ ಭಾಗ ವಹಿಸಿದ ಪೆÇಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ರವರ ಅತ್ಯುತ್ತಮ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





























