ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.19 ನಗರದ ಪಿಂಜಾರ್ ಓಣಿ ಭಾಗ 2 ಹಾಗೂ ಕೊಂಡನಾಯಕನಹಳ್ಳಿ ಭಾಗ 2 ಪ್ರದೇಶವನ್ನು ಸ್ಲಂ ಎಂದು ಘೋಷಿಸುವಂತೆ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಗ್ರಂಥಾಲಯ ಎಂದು ಮರು ನಾಮಕರಣ ಮಾಡುವಂತೆ ಸ್ಲಂ ಜನರ ಸಂಘಟನೆಯ ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಹಾಗೂ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದ ಸ್ಲಂ ಜನರ ಸಂಘಟನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು, ನಗರದ ಚಿತ್ತವಾಡ್ಗಿಯ ಸರ್ವೆ ನಂಬರ್ 223 ಹಾಗೂ 249/1 ಮತ್ತು ಕೊಂಡ ನಾಯಕನಹಳ್ಳಿ ಸರ್ವೆ ನಂಬರ್ 30 ಹಿಸ್ಸಾ ಒಂದು ಮತ್ತು ಎರಡರಲ್ಲಿ ಬರುವ ಪ್ರದೇಶದಲ್ಲಿ ಕಳೆದ 40-50 ವರ್ಷಗಳಿಂದ ನೂರಾರು ಕುಟುಂಬಗಳು ವಾಸವಾಗಿದ್ದು ಸ್ಲಂ ಘೋಷಣೆಗೆ ಈ ಪ್ರದೇಶಗಳು ಅರ್ಹವಾಗಿದ್ದರೂ ಸಹ ಸ್ಲಂ ಎಂದು ಘೋಷಣೆಯಾಗಿಲ್ಲ. ಇದರಿಂದ ಅಲ್ಲಿಯ ಜನರು ಹಕ್ಕುಪತ್ರ ಇಲ್ಲದೆ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಆದ್ದರಿಂದ ಆದಷ್ಟು ಬೇಗ ಸ್ಲಂ ಘೋಷಣೆ ಮಾಡಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಬೇಕೆಂದು ಹಾಗೂ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಹಾಗೂ ಪೌರಾಯುಕ್ತ ಎರಗುಡಿ ಶಿವಕುಮಾರ್ ಅವರು, ಇದೆ ಆ. 25 ರಂದು ನಗರ ಸಭೆಯ ಸಾಮಾನ್ಯ ಸಭೆ ಜರುಗಲಿದ್ದು. ಸದರಿ ಸಭೆಯಲ್ಲಿ ಈ ವಿಷಯಗಳನ್ನು ಚರ್ಚೆಗೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶ್ಯಾಮ್ ಚೌದರಿ, ಅಧ್ಯಕ್ಷÀ ಹೆಚ್. ಶೇಷು, ಉಪಾಧ್ಯಕ್ಷರಾದ ತನ್ವೀರ್ ಅಹ್ಮದ್, ರಾಜಭಕ್ತಿ ಬರಕಾತಿ, ವಿ.ಪರಸಪ್ಪ, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಮಹಿಳಾ ಘಟಕದ ಅಧ್ಯಕ್ಷರಾದ ಹುಲಿಗೆಮ್ಮ, ಉಪಾಧ್ಯಕ್ಷರಾದ ನೂರ್ ಜಹಾನ್, ಲತಾ ನಾಗವೇಣಿ, ದುರ್ಗಮ್ಮ, ಮಾಬುನಿ, ಮುಖಂಡರಾದ ಶೇಕ್ ಮೆಹಬೂಬ್ ಬಾಷಾ, ಪಾಂಡು ನಾಯಕ್ ಮಹಾಭಾಷಾ, ಹೊನ್ನಪ್ಪ ಪೀರ್ ಸಾಬ್ ಕಾರ್ತಿಕ್ ಕಾಗಿ ಉಮೇಶ್ ಗವಿಸಿದ್ದ, ಯುವ ಘಟಕದ ಭರತ್ ಕುಮಾರ್, ಉಮೇಶ್, ಚಿರಂಜೀವಿ, ಶ್ರೀನಿವಾಸ್, ದ್ವಾರಕೀಶ್, ಜೆ.ಬಿ.ರಘು, ಮುಕ್ಕಣ್ಣ, ಕರಿಯಪ್ಪ, ಮಾರೇಶ್, ಸೇರಿದಂತೆ ಇತರರು ಇದ್ದರು.























