Home ಜಿಲ್ಲೆ ಕಲಬುರಗಿ ಸಂಗೀತದ ಕಡೆಗೆ ಹೆಚ್ಚು ಒಲವು ತೋರಿಸಿ: ಸಿದ್ದೇಶ್ವರ ಶಾಸ್ತ್ರಿಗಳು

ಸಂಗೀತದ ಕಡೆಗೆ ಹೆಚ್ಚು ಒಲವು ತೋರಿಸಿ: ಸಿದ್ದೇಶ್ವರ ಶಾಸ್ತ್ರಿಗಳು

ಕಲಬುರಗಿ,ಜು.29-ಸಂಗೀತದ ಕಡೆ ಒಲವು ಹೆಚ್ಚು ಕೊಡಬೇಕು ಸಂಗೀತ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆದರೆ ಇವತ್ತಿನ ಕಂಪ್ಯೂಟರ್ ಮೊಬೈಲ್ ಯುಗದಲ್ಲಿ ಸಂಗೀತವನ್ನು ಮರೆತು ಹೋಗಲಾಗುತ್ತಿದೆ ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಖ್ಯಾತ ಜ್ಯೋತಿಷ್ಯ ಪುರಾಣ ಪಂಡಿತರಾದ ಸಿದ್ದೇಶ್ವರ ಶಾಸ್ತ್ರಿಗಳು ಸುಂಟನೂರು ಹೇಳಿದರು.
ನಗರದ ವಿಜಯನಗರ ಕಾಲೋನಿಯ ದಂಡಗುಂಡ ಬಸವಣ್ಣ ದೇವಸ್ಥಾನ, ವೀರಾಂಜನೇಯ ದೇವಸ್ಥಾನದಲ್ಲಿ ಗಾನಗಂಧರ್ವ ಸಂಸ್ಕøತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಶರಣು ಎ ಗುತ್ತೇದಾರ, ಶಾರದಾಬಾಯಿ ಪಾಟೀಲ್, ಶಿವರಾಯ ಅಟ್ಟೂರು, ಮಲ್ಲಿಕಾರ್ಜುನ್ ಬಾಗೇವಾಡಿ, ನಾಗರಾಜ್ ಪಾಟೀಲ ಅಲ್ಲದೆ ದೇವಸ್ಥಾನದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅಲ್ಲದೆ ಅನೇಕ ಗಣ್ಯ ಮಾನ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದರು ತಮ್ಮ ಸಂಗೀತ ಸೇವೆ ಸಲ್ಲಿಸಿದರೆಂದು ಸಂಸ್ಥೆಯ ಅಧ್ಯಕ್ಷರಾದ ಮೌನೇಶ್ ಪಂಚಾಳ ತಿಳಿಸಿದ್ದಾರೆ.