
ಬೆಂಗಳೂರು, ಜು.23-ಅಗತ್ಯ ವಸ್ತುಗಳ ದರ ಏರಿಕೆಯಿಂದ ಬಸವಳಿದಿರುವ ಗ್ರಾಹಕರಿಗೆ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಏರಿಸಿ ಶಾಕ್ ನೀಡಿದೆ. ತುಪ್ಪದ ಬೆಲೆ ಕೆಜಿಗೆ 15 ರೂ.ಹಾಗೂ ಬೆಣ್ಣೆ ದರ ಕೆಜಿಗೆ 22 ರೂ. ದರ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲೂ ದರ ಏರಿಕೆ ಮಾಡಲಾಗಿದೆ.
ಸದ್ಯ ತುಪ್ಪ ಕೆ.ಜಿಗೆ 700 ರೂಪಾಯಿ ಇದೆ. ನಾಳೆಯಿಂದ ನಂದಿನಿ ತುಪ್ಪ ಕೆ.ಜಿಗೆ 715 ರೂಪಾಯಿ ಆಗಲಿದೆ. ಬೆಣ್ಣೆ ಅರ್ಧ ಕೆ.ಜಿಗೆ 610 ರೂಪಾಯಿ ಇದೆ. ನಾಳೆಯಿಂದ 660 ರೂಪಾಯಿಗೆ ಏರಿಕೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಹಾಲಿನ ಉತ್ಪನ್ನಗಳ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಿದೆ. ತುಪ್ಪ, ಬೆಣ್ಣೆ ಖರೀದಿ ದುಬಾರಿಯಾಗಿದೆ. ಇದರಿಂದ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ದರ ಹೆಚ್ಚಳ ಮಾಡಲಾಗಿದೆ.
































