
ವಾಷಿಂಗ್ಟನ್,ಜು೬: ಹಾಲಿ ನಡೆಯುತ್ತಿರುವ ೨೦೨೬ರ ಫಿಫಾ ವಿಶ್ವಕಪ್ ಜಗತ್ತಿನಾದ್ಯಂತ ಭಾರಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ತೆಗೆದುಕೊಂಡಿರುವ ಅಭೂತಪೂರ್ವ ನಿರ್ಧಾರವೊಂದು ಕ್ರೀಡಾ ಜಗತ್ತಿನಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕ ತಂಡದ ಪ್ರಮುಖ ಸ್ಟ್ರೈಕರ್ ಫೋಲಾರಿನ್ ಬಾಲೋಗನ್ ಮೇಲಿದ್ದ ಒಂದು ಪಂದ್ಯದ ಸ್ವಯಂಚಾಲಿತ ನಿಷೇಧವನ್ನು ಫಿಫಾ ಅಮಾನತ್ತಿನಲ್ಲಿಟ್ಟಿದ್ದು (ಸಸ್ಪೆಂಡ್), ಇದು ವಿಶ್ವಕಪ್ನ ಪಾರದರ್ಶಕತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರಶ್ನಿಸುವಂತೆ ಮಾಡಿದೆ.
ಬೆಲ್ಜಿಯಂ ವಿರುದ್ಧದ ಮಹತ್ವದ ’ರೌಂಡ್ ಆಫ್ ೧೬’ ಪಂದ್ಯಕ್ಕೂ ಮುನ್ನ ಅಮೆರಿಕ ತಂಡಕ್ಕೆ ಇದು ದೊಡ್ಡ ಆನೆಬಲ ತಂದಿದ್ದರೂ, ಎದುರಾಳಿ ಬೆಲ್ಜಿಯಂ, ಇಂಗ್ಲೆಂಡ್ ಹಾಗೂ ನಾರ್ವೆ ಸೇರಿದಂತೆ ಹಲವು ಪ್ರಮುಖ ತಂಡಗಳು ಮತ್ತು ತರಬೇತುದಾರರು ಫಿಫಾ ವಿರುದ್ಧ ಕೆಂಡಕಾರಿದ್ದಾರೆ.
ವಿವಾದದ ಹಿನ್ನೆಲೆ ಏನುಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ಅಮೆರಿಕ ೨-೦ ಗೋಲುಗಳಿಂದ ಜಯಗಳಿಸಿತ್ತು. ಆದರೆ ಈ ಪಂದ್ಯದ ವೇಳೆ ಬೋಸ್ನಿಯಾದ ತಾರಿಕ್ ಮುಹಾರೆಮೊವಿಕ್ ಅವರ ಕಾಲಿಗೆ ಬಾಲೋಗನ್ ಬಲವಾಗಿ ಒದ್ದಿದ್ದಕ್ಕಾಗಿ ಅವರಿಗೆ ನೇರ ’ರೆಡ್ ಕಾರ್ಡ್’ ತೋರಿಸಿ ಮೈದಾನದಿಂದ ಹೊರಗಟ್ಟಲಾಗಿತ್ತು. ಫಿಫಾ ನಿಯಮಗಳ ಪ್ರಕಾರ, ನೇರ ರೆಡ್ ಕಾರ್ಡ್ ಪಡೆದ ಆಟಗಾರ ಮುಂದಿನ ಪಂದ್ಯದಿಂದ ಸ್ವಯಂಚಾಲಿತವಾಗಿ ನಿಷೇಧಕ್ಕೊಳಗಾಗಬೇಕಾಗುತ್ತದೆ.
ಆದರೆ, ಅಮೆರಿಕ ತಂಡದ ಪರ ಟೂರ್ನಿಯಲ್ಲಿ ಗರಿಷ್ಠ ೩ ಗೋಲು ಬಾರಿಸಿರುವ ಬಾಲೋಗನ್ ಬೆಲ್ಜಿಯಂ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಆಡಲು ಅನುವು ಮಾಡಿಕೊಡಲು ಫಿಫಾ ತನ್ನ ವಿಶೇಷ ಅಧಿಕಾರ ಬಳಸಿ ನಿಷೇಧವನ್ನು ತಡೆಹಿಡಿದಿದೆ.೧೯೬೨ರ ನಂತರ ಇದೇ ಮೊದಲು!ವಿಶ್ವಕಪ್ ಇತಿಹಾಸದಲ್ಲಿ ರೆಡ್ ಕಾರ್ಡ್ ಪಡೆದ ಆಟಗಾರನೊಬ್ಬನಿಗೆ ಮುಂದಿನ ಪಂದ್ಯ ಆಡಲು ಈ ರೀತಿ ವಿಶೇಷ ವಿನಾಯಿತಿ ನೀಡಿರುವುದು ೧೯೬೨ರ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಯಾಗಿದೆ ಎಂದು ಇತಿಹಾಸಕಾರರು ನೆನಪಿಸಿಕೊಳ್ಳುತ್ತಿದ್ದಾರೆ.
ಈ ವಿವಾದ ಮತ್ತಷ್ಟು ರಾಜಕೀಯ ರಂಗು ಪಡೆದುಕೊಳ್ಳಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಮತ್ತು ಹಸ್ತಕ್ಷೇಪ. ಬೋಸ್ನಿಯಾ ವಿರುದ್ಧದ ಪಂದ್ಯ ಮುಗಿದ ತಕ್ಷಣವೇ ಟ್ರಂಪ್ ಅವರು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರಿಗೆ ನೇರವಾಗಿ ಕರೆ ಮಾಡಿ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದರು ಎನ್ನಲಾಗಿದೆ.ಬಾಲೋಗನ್ ಮೇಲಿನ ನಿಷೇಧ ರದ್ದಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಒಂದು ದೊಡ್ಡ ಅನ್ಯಾಯವನ್ನು ಸರಿಪಡಿಸಿ, ಸೂಕ್ತ ನಿರ್ಧಾರ ಕೈಗೊಂಡಿದ್ದಕ್ಕಾಗಿ ಫಿಫಾಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದು ಕ್ರೀಡೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂಬ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.ಜಾಗತಿಕ ಮಟ್ಟದಲ್ಲಿ ವ್ಯಕ್ತವಾದ ಆಕ್ರೋಶದ ಅಲೆ”ಇದು ಏಪ್ರಿಲ್ ಫೂಲ್ ನಿರ್ಧಾರ” ಬೆಲ್ಜಿಯಂ ಕೋಚ್ ಕಿಡಿ:ಬೆಲ್ಜಿಯಂ ಫುಟ್ಬಾಲ್ ಸಂಸ್ಥೆ (ಖಃಈಂ) ಈ ನಿರ್ಧಾರದಿಂದ ತೀವ್ರ ಆಶ್ಚರ್ಯಚಕಿತಗೊಂಡಿದೆ. ಬೆಲ್ಜಿಯಂ ತರಬೇತುದಾರ ರೂಡಿ ಗಾರ್ಸಿಯಾ ಫಿಫಾವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ಫಿಫಾ ಕಚೇರಿಗಳಲ್ಲಿ ಜುಲೈ ೫ರ ದಿನಾಂಕವನ್ನು ಯುರೋಪಿನ ಏಪ್ರಿಲ್ ೧ (ಮೂರ್ಖರ ದಿನ) ಎಂದು ಭಾವಿಸಲಾಗಿದೆ ಅನಿಸುತ್ತದೆ.
ಇದು ಫುಟ್ಬಾಲ್ನ ನೈತಿಕತೆ ಮತ್ತು ಫೇರ್ ಪ್ಲೇ ನಿಯಮಗಳಿಗೆ ಮಾಡಿದ ದ್ರೋಹ,” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ ಕ್ರೀಡಾ ನ್ಯಾಯಾಲಯದ (ಅಂS) ಮೊರೆ ಹೋಗುವ ಬಗ್ಗೆ ಬೆಲ್ಜಿಯಂ ಪರಿಶೀಲಿಸುತ್ತಿದೆ.”ಇದಕ್ಕೊಂದು ಕೊನೆಯಿಲ್ಲವೇ?” ? ಥಾಮಸ್ ಟುಚೆಲ್:ಇಂಗ್ಲೆಂಡ್ ತಂಡದ ಮ್ಯಾನೇಜರ್ ಥಾಮಸ್ ಟುಚೆಲ್ ಕಳವಳ ವ್ಯಕ್ತಪಡಿಸಿದ್ದು, “ಈ ರೀತಿ ನಿಯಮಗಳನ್ನು ಗಾಳಿಗೆ ತೂರಿ ನಿರ್ಧಾರ ಕೈಗೊಂಡರೆ ಇನ್ನು ಮುಂದೆ ಇದಕ್ಕೆ ಕೊನೆ ಎಲ್ಲಿದೆ? ಪ್ರತಿಯೊಂದು ಕಾರ್ಡ್ ಮೇಲೂ ಹೀಗೆ ಚರ್ಚೆ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.
ನಾರ್ವೆ ಕೋಚ್ ಸ್ಟಾಲೆ ಸೋಲ್ಬಾಕನ್ ಸಹ, “ಇದು ಅತ್ಯಂತ ಕೆಟ್ಟ ನಿರ್ಧಾರ. ಮುಂದಿನ ದಿನಗಳಲ್ಲಿ ಕಮಿಟಿಗಳು ಕಾರ್ಡ್ಗಳನ್ನು ರದ್ದು ಮಾಡಲು ಶುರು ಮಾಡಿದರೆ ವಿಶ್ವಕಪ್ನ ಮೌಲ್ಯವೇ ಉಳಿಯುವುದಿಲ್ಲ,” ಎಂದು ಎಚ್ಚರಿಸಿದ್ದಾರೆ
































