Home ಜಿಲ್ಲೆ ಕಲಬುರಗಿ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸಿಎಸ್‍ಆರ್ ನಿತ್ಯ ಸಹಕಾರ: ಚೇತನ್ ವಾಘ್ಮೋರೆ

ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸಿಎಸ್‍ಆರ್ ನಿತ್ಯ ಸಹಕಾರ: ಚೇತನ್ ವಾಘ್ಮೋರೆ

ಸೇಡಂ, ಜು,06: ನಮ್ಮ ಸಿಮೆಂಟ್ ಕಂಪನಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ನಮ್ಮ ಸಿಎಸ್‍ಆರ್ (ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯ ಸಹಕಾರ ನಿರಂತರವಾಗಿರಲಿದೆ ಎಂದು ಸಿಎಸ್‍ಆರ್ ವಿಭಾಗದ ಮುಖ್ಯಸ್ಥರಾದ ಚೇತನ್ ವಾಗ್ಮೋರೆ ಹೇಳಿದರು.ತಾಲೂಕಿನ ಸಮಖೇಡ ತಾಂಡಾದಲ್ಲಿಂದು ಅಂಗನವಾಡಿ ಕೇಂದ್ರವನ್ನು ನವೀಕರಣಗೊಳಿಸಿ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ನಮ್ಮ ಸಿಎಸ್‍ಆರ್ ವಿಭಾಗವು ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಪ್ರಗತಿ ಸಾಧ್ಯ ಎಂದು ಚೇತನ್ ವಾಘ್ಮೋರೆ ಆಶಯ ವ್ಯಕ್ತಪಡಿಸಿದರು. ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ರಾಜಶೇಖರ ಪೂರಾಣಿಕ ಮಾತನಾಡಿ ಸಿಎಸ್ ಆರ್ ವಿಭಾಗದಿಂದ ಶೈಕ್ಷಣಿಕವಾಗಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳು ಮಾಡುತ್ತಿರುವುದು ಸಂತಸ ತಂದಿದೆ ಇದರ ಜೊತೆಗೆ ಮಳಖೇಡ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಪ್ರೌಢ ಶಾಲೆಗಳು ಇನ್ನು ಹೆಚ್ಚಿನ ರೀತಿಯ ಅಭಿವೃದ್ಧಿ ಕಾರ್ಯಗಳು ಮಾಡುವ ಪ್ರಯತ್ನ ನಿರಂತರ ವಿರಲಿ ಎಂದರು. ಸಿಡಿಪಿಒ ಶ್ರೀಮತಿ ಅನುರಾಧಾ ಎಸ್ ಪಾಟೀಲ್ ಮಾತನಾಡಿ ಅಂಗನವಾಡಿ ಕೇಂದ್ರಗಳ ನವೀಕರಣ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಪ್ರಯತ್ನ ನಿಮ್ಮ ಕಂಪನಿಯಿಂದ ಮಾಡುತ್ತಿರುವುದು ಸಂತಸ ತಂದಿದೆ ಜೊತೆಗೆ ಇನ್ನೂ ಹೆಚ್ಚಿನ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ನಿಮ್ಮ ಸಹಕಾರ ಅಗತ್ಯವಿದೆ ಎಂದರು. ಈ ವೇಳೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇಂದುಮತಿ,ಹಾಗೂ ಕಂಪನಿಯ ಸಿಎಸ್ಆರ್ ವಿಭಾಗದ ಅಶ್ವಿನಿ ಜಾಧವ, ವೀರಶೈವ ಲಿಂಗಾಯತ ಮಹಾಸಭಾ ಗ್ರಾಮ ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ ಹಳಿಜೋಳ, ತಾಂಡದ ಪ್ರಮುಖರಾದ ಗೋವಿಂದ ಚವಾಣ್, ರಾಜಶೇಖರ, ಕಂಪನಿಯ ಸಿಬ್ಬಂದಿ ಕಾಶಿಬಾಯಿ ಮತ್ತು ದೀಪಕ, ಪೌಂಡೇಶನ ನ ಶರಣು ಮತ್ತು ಜಗದೇವಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ಕಲರ್ ಮಾಡಿರುವ ರಮೇಶ್ ಆಟ್ರ್ಸ್,ರಾಮು, ಪತ್ರಕರ್ತ ಸುರೇಶ್ ಬಿಜನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು