Home ಕ್ರೀಡೆ ಅತ್ಯಂತ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೂರ್ಯವಂಶಿ ಪದಾರ್ಪಣೆ

ಅತ್ಯಂತ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೂರ್ಯವಂಶಿ ಪದಾರ್ಪಣೆ

ಮಾಂಚೆಸ್ಟರ್ ಜು.4-ಇಂಗ್ಲೆಂಡ್ ​ಮತ್ತು ಭಾರತ ನಡುವಿನ 2ನೇ ಟಿ20 ಪಂದ್ಯದಲ್ಲಿ 15 ವರ್ಷದ ಎಡಗೈ ಸ್ಫೋಟಕ ಬ್ಯಾಟರ್​ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಟಿ.20 ಕ್ರಿಕೆಟ್ ನಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನೆಂಬ ಕೀರ್ತಿಗೆ ಸೂರ್ಯವಂಶಿ ಭಾಜನರಾಗಿದ್ದಾರೆ.


ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಇಶಾನ್ ಕಿಶನ್ ಅವರಂತಹ ತಾರಾ ಆಟಗಾರರ ದಾಖಲೆಗಳನ್ನು ಮುರಿದಿದ್ದಾರೆ.


ಈ ದಾಖಲೆ ಮಾಸ್ಟರ್ ಬ್ಲಾಸ್ಡರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಅವರು 1989ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಮೊದಲ ಪಂದ್ಯವನ್ನು ಆಡಿದಾಗ ಸಚಿನ್ ಗೆ 16 ವರ್ಷ 205 ದಿನವಾಗಿತ್ತು. ಈಗ ಸೂರ್ಯವಂಶಿ15 ನೇ ವಯಸ್ಸಿನಲ್ಲಿ ಐರ್ಲೆಂಡ್ ವಿರುದ್ದ ಪದಾರ್ಪಣೆ ಮಾಡಿ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.


ವೈಭವ್​ 15 ವರ್ಷ ಮತ್ತು 99 ದಿನಗಳಲ್ಲಿ ಅಂತರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಪೂರ್ಣ ಸದಸ್ಯ ರಾಷ್ಟ್ರವೊಂದರ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದರ್ಪಣೆ ಮಾಡುವ ಕನಿಷ್ಠ ವಯಸ್ಸಿನ ಮಿತಿಯನ್ನು 15 ವರ್ಷಕ್ಕೆ ನಿಗದಿ ಪಡಿಸಿ ಹೊಸ ನಿಯಮವನ್ನು ಜಾರಿಗೊಳಿಸಿತು. ಇದಕ್ಕೂ ಮೊದಲು ವಯಸ್ಸಿನ ಮಿತಿ 14 ಇತ್ತು. ಇದೀಗ ವೈಭವ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕಾಗಿ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.