
ಅಫಜಲಪುರ,ಜು.4-ಠಾಣೆಯಿಂದ ಪರಾರಿಯಾಗಿ ಪೆÇಲೀಸರಿಗೆ ತಲೆನೋವಾಗಿದ್ದ ಪೆÇೀಕ್ಸೊ ಹಾಗೂ ಬಾಲಕಿ ಅಪಹರಣ ಪ್ರಕರಣದ ಆರೋಪಿ ಮಂಜುನಾಥ ಇಂಗಳೆ ಎಂಬಾತನನ್ನು ಕೊನೆಗೂ ಮತ್ತೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ತೆಲ್ಲೋಣಗಿ ಗ್ರಾಮದ ಜಮೀನು ಒಂದರಲ್ಲಿ ಅಡಗಿ ಕುಳಿತ ಆರೋಪಿ ಮಂಜುನಾಥ ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸ್ಥಳೀಯರು ನೀಡಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ತಮ್ಮರಾಯ ಪಾಟೀಲ್ ನೇತೃತ್ವದಲ್ಲಿ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗಪ್ಪ ಒಡೆಯರ್ ಹಾಗೂ ಪೆÇೀಲಿಸರ ತಂಡ ದೌಡಾಯಿಸಿ ಆರೋಪಿಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಗುರುವಾರ ನಸುಕಿನ 3 ಗಂಟೆಗೆ ಠಾಣೆಯಿಂದ ಆರೋಪಿ ಪರಾರಿಯಾಗಿದ್ದರಿಂದ ಪೆÇೀಲಿಸ್ ಇಲಾಖೆಗೆ ಬಹುದೊಡ್ಡ ಮುಜುಗರ ಆಗಿತ್ತು. ಆರೋಪಿ ಪರಾರಿಯಾದ ತಕ್ಷಣ ಕಲಬುರಗಿ ಜಿಲ್ಲಾ ಪೆÇಲೀಸರು ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದರು. ಗಡಿ ಪ್ರದೇಶಗಳು, ಪ್ರಮುಖ ರಸ್ತೆಗಳು ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿತ್ತು. ಗುಪ್ತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೆÇಲೀಸರು, ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಮಂಜುನಾಥ್ನನ್ನು ತೆಲ್ಲೋಣಗಿ ಗ್ರಾಮದ ಹೊರವಲಯದಲ್ಲಿ ವಶಕ್ಕೆ ಪಡೆದಿದ್ದಾರೆ. ಠಾಣೆಯಿಂದ ಪರಾರಿಯಾದ ಹಿನ್ನೆಲೆಯಲ್ಲಿ, ಪೆÇೀಕ್ಸೋ ಪ್ರಕರಣದ ಜತೆಗೆ ಪೆÇಲೀಸ್ ವಶದಿಂದ ತಪ್ಪಿಸಿಕೊಂಡ ಆರೋಪದಡಿ ಮಂಜುನಾಥ್ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಘಟನೆಯಲ್ಲಿ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಡ್ ಕಾನ್ಸಸ್ಟೇಬಲ್ ರವಿದಾಸ್ ಕಟ್ಟಿಮನಿ ಮತ್ತು ಕಾನ್ಸ್ಟೆಬಲ್ಗಳಾದ ಶಿವಣ್ಣ ಹಾಗೂ ಪ್ರಶಾಂತ್ ದೇವರ ಮತ್ತು ಇಬ್ಬರು ಗೃಹ ರಕ್ಷಕ ಸಿಬ್ಬಂದಿಗಳಾದ ಶಾಂತಿ ಸಾಗರ ಹಾಗೂ ಶ್ರೀಶೈಲ ವಿರುದ್ಧ ಇಲಾಖಾ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ್ ವರದಿ ಸಲ್ಲಿಸಿದ್ದರು. ಈ ವರದಿ ಅನ್ವಯ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು ಪಿಎಸ್ಐ ಸೋಮಲಿಂಗ ಒಡೆಯರ್ ಮತ್ತು ಮೂವರು ಪೆÇಲೀಸರನ್ನು ಅಮಾನತುಗೊಳಿಸಿದ್ದಾರೆ.


























