Home ಜಿಲ್ಲೆ ಕಲಬುರಗಿ ತಹಶೀಲ್ದಾರ್ ಯಲಗೋಡಗೆ ಬೀಳ್ಕೊಡುಗೆ

ತಹಶೀಲ್ದಾರ್ ಯಲಗೋಡಗೆ ಬೀಳ್ಕೊಡುಗೆ

ಜೇವರ್ಗಿ,ಜು.4-ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಆ ಅಧಿಕಾರಿ ನಿರ್ವಹಿಸಿದ ಪಾತ್ರ ಸ್ಥಳೀಯರಲ್ಲಿ ಶಾಶ್ವತವಾಗಿ ಉಳಿಯುವಂತಾದಾಗ ಮಾತ್ರ ಸರ್ಕಾರಿ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ಪ್ರಗತಿಪರ ಚಿಂತಕ ಭಗವಂತ್ರಾಯ ಬೆಣ್ಣೂರ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ವರ್ಗಾವಣೆಗೊಂಡ ತಹಶೀಲ್ದಾರ್ ಮಲ್ಲಣ್ಣ ಯಲಗೋಡರವರಿಗೆ ಕಂದಾಯ ಇಲಾಖೆ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಹಲವು ಒತ್ತಡಗಳ ನಡುವೆ ಕಾರ್ಯ ನಿರ್ವಹಿಸಬೇಕಾಗಿದೆ. ಇದಲ್ಲದೆ, ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿ ಗೊಳಿಸುವುದು, ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮಲ್ಲಣ್ಣ ಯಲಗೋಡರವರು ಉತ್ತಮ ಕಾರ್ಯನಿರ್ವಹಿಸುವ ಮೂಲಕ ತಾಲ್ಲೂಕಿನ ಜನತೆಯ ಮನದಲ್ಲಿ ಉಳಿದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಲ್ಲಣ್ಣ ಯಲಗೋಡ ಮಾತನಾಡಿ, ನಾನು ಜೇವರ್ಗಿಗೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದಾಗ, ಇಲ್ಲಿ ಸರ್ಕಾರದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳದೇ ಹಿಂದುಳಿತ್ತು. ಕಳೆದ ನನ್ನ ಅವಧಿಯಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ತ್ವರಿತ ಗತಿಯಲ್ಲಿ ಕಾರ್ಯಗತಗೊಳಿಸಿ, ರಾಜ್ಯದಲ್ಲಿಯೇ ಜೇವರ್ಗಿಯನ್ನು ಗುರುತಿಸುವಂತೆ ಮಾಡಿದ್ದೇನೆ ಎಂದರು.
ನೂತನ ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶಕುಮಾರ ಸಂಗನ್, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇ±ಕಿ ಬಸಮ್ಮ ಪಾಟೀಲ, ಅಬಕಾರಿ ನಿರೀಕ್ಷಕ ರೇವಣಸಿದ್ದಪ್ಪ ಹೂಗಾರ, ಪಶು ಇಲಾಖೆಯ ಡಾ.ಶೋಭಾ ಸಜ್ಜನ್, ಎಡಿಎಲ್ ಆರ್ ಸಿದ್ದಣ್ಣ ಹುಲಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ಟಿಪ್ಪು ಸುಲ್ತಾನ್ ಕಮಿಟಿ ಅಧ್ಯಕ್ಷ ಮೋಹಿಯುದ್ದೀನ್ ಇನಾಮದಾರ, ವಾಹೀದ್ ಸೇಠ ಗಿರಣಿ, ಸಂಗಣ್ಣ ಹೂಗಾರ, ರೇವಣಸಿದ್ದಪ್ಪ ಕಮಾನಮನಿ, ಬಿ.ಹೆಚ್. ಮಾಲಿಪಾಟೀಲ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ್ ಸಂತೋಷ ಸಂಗಮ, ಬಾಪುಗೌಡ ಪಾಟೀಲ, ಸಾಯಬಣ್ಣ ಕಲ್ಯಾಣಕರ್, ಗಂಗಾಧರ, ದಶರಥ ಸೇರಿದಂತೆ S ಭಾಗವಹಿಸಿದ್ದರು. ಗ್ರಾಮ ಲೆಕ್ಕಿಗೆ ಮಕ್ಯೂಲ್ ಪಟೇಲ್ ನಿರೂಪಿಸಿ ವಂದಿಸಿದರು.