
ಕಲಬುರಗಿ,ಜು.4: ರ್ಯಾಪಿಡೋ ಸೇರಿದಂತೆ ಆಪ್ ಆಧಾರಿತ ಅಗ್ರಿಗೇಟರ್ ಸಂಸ್ಥೆ ಮೂಲಕ ವೈಟ್ ಬೋರ್ಡ್ (ನಾನ್ ಟ್ರಾನ್ಸ್ಫೋರ್ಟ್ ) ಮೋಟಾರ್ ಸೈಕಲ್‍ಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುತ್ತಿರುವ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಮೋಟಾರು ವಾಹನ ಕಾಯ್ದೆ, 1988 ಹಾಗೂ ಇತರೆ ಅನ್ವಯವಾಗುವ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೋಟಾರು ವಾಹನ ಕಾಯ್ದೆ, 1988 ಸೆಕ್ಷನ್ 66 ಪ್ರಕಾರ ಅಗತ್ಯ ಪರ್ಮಿಟ್ ಇಲ್ಲದೆ ಟ್ರಾನ್ಸ್ ಫೋರ್ಟ ವೆಹಿಕಲ್ ಅನ್ನು ಬಾಡಿಗೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ.ಆದ್ದರಿಂದ ಕಲಬುರಗಿ ಜಿಲ್ಲೆಯಲ್ಲಿ ರ್ಯಾಪಿಡೋ ಸೇರಿದಂತೆ ಯಾವುದೇ ಆಪ್ ಮೂಲಕ ವೈಟ್ ಬೋರ್ಡ್ ಮೋಟಾರ್ ಸೈಕಲ್‍ಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸಲಾಗುತ್ತಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಂಬಂಧಪಟ್ಟ ವಾಹನಗಳ ದಾಖಲೆಗಳನ್ನು ಪರಿಶೀಲಿಸಬೇಕು. ತನಿಖೆಯಲ್ಲಿ ಕಾನೂನುಗಳ ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಪಟ್ಟ ವಾಹನ ಮಾಲೀಕರು, ಚಾಲಕರು ಹಾಗೂ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಹಾಗೂ ಅಗತ್ಯವಿದ್ದಲ್ಲಿ ಅಪರಾಧ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಬೇಕು.ಕರ್ನಾಟಕ ಹೈಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಿ ಅಥವಾ ತಪ್ಪಾಗಿ ಬಳಸಿಕೊಂಡು ವೈಟ್ ಬೋರ್ಡ್ ವಾಹನಗಳ ಮೂಲಕ ಬೈಕ್ ಟ್ಯಾಕ್ಸಿ ಸೇವೆ ನಡೆಸುತ್ತಿರುವ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು.ಕಲಬುರಗಿ ಜಿಲ್ಲೆಯ ಎಲ್ಲಾ ಪೆÇಲೀಸ್ ಠಾಣೆಗಳು ಹಾಗೂ ಸಾರಿಗೆ ಅಧಿಕಾರಿಗಳಿಗೆ ಈ ಕುರಿತು ವಿಶೇಷ ನಿರ್ದೇಶನ ನೀಡಿ, ನಿಯಮಿತ ಜಾರಿ ಕಾರ್ಯಾಚರಣೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಮಾಲಿ ಪಾಟೀಲ,ಚಿದಾನಂದ ,ಎಂಡಿ ಹುಸೇನ್,ಪವನಕುಮಾರ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು


























