
ಕಲಬುರಗಿ,ಜು.4: ಇಲ್ಲಿನ ಶಿವಾಜಿನಗರದ ಶ್ರೀ ಸದ್ಗುರು ಕಲಾ ಸಂಸ್ಥೆ ವತಿಯಿಂದ ವಚನ ಪಿತಾಮಹ ಡಾ. ಫ. ಗು ಹಳಕಟ್ಟಿರವರ ಮತ್ತು ಪೂಜ್ಯ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿ ಅವರ ಸಂಸ್ಮರಣೋತ್ಸವ ಆಚರಿಸಲಾಯಿತು.
ಬಸವ ಧರ್ಮ ಪ್ರಚಾರಕ ಜಗನ್ನಾಥ ಪನಸಾಲೆ ಹಾಗೂ ಉಡುಪಿ ಜಿಲ್ಲೆ ಶ್ರೀ ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷರು ಈ ಕಾರ್ಯಕ್ರಮದ ಪೂಜೆ ನೆರವೇರಿಸಿದರು. ಅತಿಥಿಗಳಾಗಿ ಅಶೋಕ ಪಂಚಾಕ್ಷರಿ, ಬಸವರಾಜ ಮದರಿ, ಶಿವಾನಂದ ಬಿಲಗುಂದಿ, ಶರಣಪ್ಪ ದೇಗಾಂವ, ಮಲ್ಲಯ್ಯ ಸ್ವಾಮಿ ಅಳಗಿ, ಪ್ರಭಾಕರ ಜಮಾದಾರ, ಸಂಗಮೇಶ ಹುಡಗಿ, ಜಗನ್ನಾಥ ಕಣ್ಣಿ ಆಗಮಿಸಿದ್ದರು. ಬಸವಕುಮಾರ ಕೆಂಗನಾಳ ಸ್ವಾಗತಿಸಿದರು .ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಕೆಂಗನಾಳ ಅವರು ಎಲ್ಲಾ ಅತಿಥಿಗಳಿಗೂ ವಚನ ಪುಸ್ತಕಗಳನ್ನು ಕೊಟ್ಟು ಸತ್ಕರಿಸಿದರು. ನಂತರ ಬಸವ ಪ್ರಸಾದ ವಿತರಿಸಲಾಯಿತು.


























