
ಹುಬ್ಬಳ್ಳಿ,ಜು೪: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಹಾಗೂ ಉಪಮೇಯರ್ ಸ್ಥಾನಕ್ಕೆ ಅದೇ ಪಕ್ಷದ ರತ್ನಾಬಾಯಿ ನಾಝರೆ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ವಾರ್ಡ್ ನಂ. ೬೯ ರ ದುರ್ಗಮ್ಮ ಬಿಜವಾಡ ಕಣದಲ್ಲಿದ್ದರೆ, ಉಪಮೇಯರ್ ಸ್ಥಾನಕ್ಕೆ ಧಾರವಾಡದ ವಾರ್ಡ್ ನಂ. ೯ ರ ರತ್ನಾಭಾಯಿ ನಾಝರೆ ಕಣದಲ್ಲಿದ್ದರು.
ಕಾಂಗ್ರೆಸ್ನಿAದ ವಾರ್ಡ್ ನಂ. ೨೦ ರ ಕವಿತಾ ಕಬ್ಬೇರ್ ಮೇಯರ್ ಸ್ಥಾನಕ್ಕೆ ಹಾಗೂ ವಾರ್ಡ್ ನಂ. ೬ ರ ದಿಲ್ಶಾದ್ ಬೇಗಂ ನದಾಫ್ ಉಪಮೇಯರ್ ಸ್ಥಾನಕ್ಕೆ ಕಣದಲ್ಲಿದ್ದರು.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದರಾದ ಪ್ರಲ್ಹಾದ್ ಜೋಶಿ, ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ ಸಂಕನೂರ, ಲಿಂಗರಾಜ ಪಾಟೀಲ್ ಅವರು ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ವ್ಯಕ್ತಪಡಿಸಿದರು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು.
ಅಧಿಕೃತ ಘೋಷಣೆ ಹೊರ ಬೀಳುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


























