
ವಿಜಯಪುರ, ಜೂ. 25:ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪೆÇಲೀಸರು ಜಂಟಿಯಾಗಿ ದಾಳಿ ನಡೆಸಿ, 10 ವಾಣಿಜ್ಯ ಎಲ್ ಪಿಜಿ ಹಾಗೂ 13 ಗೃಹ ಬಳಕೆ ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ರಹಿಂನಗರ ಪ್ರದೇಶದಲ್ಲಿರುವ ರಾಜೇಶ್ವರಿ ಮಲ್ಲಪ್ಪ ಬರಟಗಿ ಅವರ ಖಾಲಿ ಜಾಗೆಯಲ್ಲಿನ ಶೆಡ್ನಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳಿಂದ ವಾಣಿಜ್ಯ ಸಿಲಿಂಡರ್ಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸಿ ಹೋಟೆಲ್ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ 10 ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳು ಹಾಗೂ 13 ಗೃಹಬಳಕೆಯ ಸಿಲಿಂಡರ್ಗಳು ಸೇರಿದಂತೆ ಒಟ್ಟು 23 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಎಲ್ಪಿಜಿ (ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಆದೇಶ-2000 ಹಾಗೂ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7ರ ಅಡಿಯಲ್ಲಿ ಗಾಂಧೀಚೌಕ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಹಾರ ನಿರೀಕ್ಷಕ ಶಂಕರಗೌಡ ಬಿ. ಬಿರಾದಾರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್ಗಳಲ್ಲಿನ ಗ್ಯಾಸ್ ಅನ್ನು ವಾಹನಗಳಿಗೆ ಅಥವಾ ವಾಣಿಜ್ಯ ಸಿಲಿಂಡರ್ಗಳಿಗೆ ಅಕ್ರಮವಾಗಿ ತುಂಬಿಸಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಹೋಟೆಲ್ ಮಾಲೀಕರು ಸರ್ಕಾರದಿಂದ ಮಾನ್ಯತೆ ಪಡೆದ ವಾಣಿಜ್ಯ ಎಲ್ಪಿಜಿ ವಿತರಕರಿಂದ ಕಸ್ಟಮರ್ ಐಡಿ ಪಡೆದು ಅಧಿಕೃತ ವಾಣಿಜ್ಯ ಸಿಲಿಂಡರ್ಗಳನ್ನೇ ಬಳಸಬೇಕು ಎಂದು ಇಲಾಖೆ ಸೂಚಿಸಿದೆ.
ಅನಧಿಕೃತ ಎಲ್ಪಿಜಿ ಬಳಕೆ ಪತ್ತೆಯಾದಲ್ಲಿ ಸಂಬಂಧಿತ ಹೋಟೆಲ್ ಮಾಲೀಕರ ವಿರುದ್ಧವೂ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
























