
ಚಿತ್ತಾಪುರ; ಜೂ.25:ತಾಲೂಕಿನ ಕರದಾಳ ಹಾಗೂ ಚಿತ್ತಾಪುರ ರಸ್ತೆ ಮದ್ಯದಲ್ಲಿ ಕೆಕೆಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್’ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.
ಬಮ್ಮನಳ್ಳಿ ಗ್ರಾಮದ ನಿವಾಸಿ ದೇವರಾಜ ಅಯ್ಯಪ್ಪ (19), ಮುಡಬೂಳ ಗ್ರಾಮದ ನಿವಾಸಿ ಲಕ್ಷ್ಮೀಕಾಂತ (24), ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮದ ನಿವಾಸಿ ಪ್ರಕಾಶ ಬಸ್ಸಪ್ಪ (22) ಮೃತಪಟ್ಟ ದುರ್ದೈವಿಗಳು.
ಕೆಕೆಆರ್’ಟಿಸಿ ಬಸ್ ಚಿತ್ತಾಪುರದಿಂದ ಸನ್ನತ್ತಿ ಕಡೆಗೆ ಹಾಗೂ ಬೈಕ್ ಸವಾರರು ಬಮ್ಮನಳ್ಳಿ ಗ್ರಾಮದ ಕಡೆಯಿಂದ ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮಕ್ಕೆ ತೆರಳುವಾಗ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಲರಗೌಡ ಪಾಟೀಲ್, ಸಿಪಿಐ ಎಸ್.ಸಿ ಪಾಟೀಲ್, ಪಿಎಸ್’ಐ ಮಂಜುನಾಥ ರೆಡ್ಡಿ, ಸಿಬ್ಬಂದಿಗಳಾದ ದತ್ತು, ಅಯ್ಯಣ್ಣ, ಅಜರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
























