Home ಜಿಲ್ಲೆ ಮೈಸೂರು ಕುಡುಕರ ಹುಚ್ಚಾಟ ಮಹದೇಶ್ವರ ಬೆಟ್ಟಕ್ಕೆ ಮದ್ಯ ಸೇವಿಸಿ ಆಗಮಿಸುವವರ ಕಾಟ

ಕುಡುಕರ ಹುಚ್ಚಾಟ ಮಹದೇಶ್ವರ ಬೆಟ್ಟಕ್ಕೆ ಮದ್ಯ ಸೇವಿಸಿ ಆಗಮಿಸುವವರ ಕಾಟ

ಸಂಜೆವಾಣಿ ವಾರ್ತೆ
ಹನೂರು ಜೂ 16:-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಮದ್ಯ ಸೇವಿಸಿ ಆಗಮಿಸುವವರ ಕಾಟ ಮಿತಿಮೀರಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ಪೆÇೀಲಿಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರು ಭಕ್ತಾದಿಗಳ ಆರೋಪವಾಗಿದೆ.


ಮಲೆ ಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ವಿಶೇಷವಾಗಿ ಹಾಗೂ ಶನಿವಾರ ಭಾನುವಾರ ರಜಾ ದಿನದ ಹಿನ್ನೆಲೆ ಕಳೆದ ಮೂರು ನಾಲ್ಕು ದಿನಗಳಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಆಗಮಿಸುತ್ತಿದ್ದು. ಇದರ ಮಧ್ಯೆ ರಾತ್ರಿ ವೇಳೆಯಲ್ಲಿ ಅತಿಯಾದ ಮದ್ಯ ಸೇವಿಸಿ ನೋಡು ರಸ್ತೆಯಲ್ಲಿ ಮಲಗಿದ ವ್ಯಕ್ತಿ ನಿಯಂತ್ರಣವಿಲ್ಲದೆ ಎದ್ದು ಕಾರು ಹತ್ತಿಕೊಂಡು ಹೋದಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಮಹದೇಶ್ವರ ಬೆಟ್ಟಕ್ಕೆ ಅಕ್ರಮ ಮಧ್ಯೆ ಸಾಗಾಟ ಮತ್ತೆ ಸೇವಿಸಿ ವಾಹನ ಚಲಾಯಿಸುವವರನ್ನು ಕಡಿವಾಣ ಹಾಕಲು ತಾಳು ಬೆಟ್ಟದ ಮೊದಲೇ ಪೆÇಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಚೆಕ್ ಪೆÇೀಸ್ಟ್ ಇದ್ದರೂ ಸಹ ಇಲ್ಲಿನ ನಿಯೋಜಿತ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದ್ದಾರೆ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ.


ತೀವ್ರವಾದ ತಿರುವುಗಳು ದಟ್ಟಾರಣ್ಯದ ನಡುವೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಪ್ರಯಾಣಿಕರು ಬೈಕ್ ಸವಾರರು ಸಾರಿಗೆ ಬಸ್ ಖಾಸಗಿ ಬಸ್ ಗಳು ವೇಗ ಪರಿಮಿತಿ ಇಲ್ಲದೆ ಚಲಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಮಧ್ಯೆ ಕಾರು ಇತರ ವಾಹನಗಳಲ್ಲಿ ಮಧ್ಯ ಸೇವನೆ ಮಾಡಿಕೊಂಡು ವಾಹನ ಚಲಾಯಿಸುವುದರ ಜೊತೆಗೆ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸುವುದು. ಇದರಿಂದ ಅಜಾಗರೂಕರಾಗಿ ಬರುವ ವಾಹನ ಸವಾರರಿಗೆ ತೊಂದರೆಯಾಗುವುದಲ್ಲದೆ ಅಪಘಾತಗಳು ಸಂಭವಿಸುತ್ತಿವೆ.
ಕಳೆದೆರಡು ದಿನಗಳಲ್ಲಿ ತಾಳು ಬೆಟ್ಟದ ಚೆಕ್ ಪೆÇೀಸ್ಟ್ ಮೂಲಕವೇ ಬೆಟ್ಟದ ಕಡೆಗೆ ಹೊರಟು ಕಾರಿನಲ್ಲಿ ಬಂದ ಒಬ್ಬ ವ್ಯಕ್ತಿಯು ಅತಿಯಾದ ಮದ್ಯ ಸೇವಿಸಿ ನಿಯಂತ್ರಣವಿಲ್ಲದೆ ಅರಬೆತ್ತಲೆಯಲ್ಲಿ ನಡು ರಸ್ತೆ ಮಧ್ಯದಲ್ಲಿಯೇ ಮಲಗಿದ್ದಾನೆ. ಇತರ ವಾಹನಗಳು ಬಂದು ಶಬ್ದ ಮಾಡಿದಾಗ ಮಲಗಿದ್ದ ವ್ಯಕ್ತಿ ಎದ್ದು ಕಾರಿನಲ್ಲಿ ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನಾದರೂ ಎಚ್ಚೆತ್ತು ಪೆÇಲೀಸ್ ಇಲಾಖೆ ಅರಣ್ಯ ಇಲಾಖೆಯವರು ಚೆಕ್ ಪೆÇೀಸ್ಟ್ ತಪಾಸಣೆಯನ್ನು ಕಟ್ಟುನಿಟ್ಟಿನಿಂದ ಮಾಡುವ ಮೂಲಕ ಮದ್ಯ ವ್ಯಸನಿಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕಿದೆ.