
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.16 ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಗಿರಿಜಾ ಕಲ್ಯಾಣ ಮಹೋತ್ಸವವು ಜೂನ್ 18ರಿಂದ 23ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.
ಜೂನ್ 18ರಂದು ಸಂಜೆ 6 ಗಂಟೆಗೆ ಅನುಜ್ಞಾಪೂರ್ವಕ ಎಣ್ಣೆ ಅರಿಶಿನ ಪ್ರಧಾನ ನಂತರ ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ, 19ರಂದು ಪಂಚಮಿ ಪ್ರಾತಃಕಾಲ 10 ಗಂಟೆಗೆ ಅಂಕುರಾರ್ಪಣ ಪೂರ್ವಕ ಕನ್ನಡಿ ಕಲಶ ತರುವುದು. ನಂತರ ಮಂಗಳಸ್ನಾನ ಬೆಳೆದು ನಾಂದಿ ನಡೆದು ಗ್ರಹಯಜ್ಞ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವವು ಬೆಳೆಯುತ್ತದೆ. ಅನಂತರ ರಾತ್ರಿ 8 ರಿಂದ 8.36 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅಕ್ಷತಾರೋಪಣೆ, ಧಾರಾಮಹೋತ್ಸವ, ಪ್ರಧಾನಹೋಮ, ಮಹಾಮಂಗಳಾರತಿ ನಡೆಯಲಿದೆ.
ಜೂನ್ 20ರಂದು ಷಷ್ಠಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಾಲೋತ್ಸವವು ರಾತ್ರಿ ಔಪಾಸನೆ ಉಯ್ಯಾಲೋತ್ಸವ, 21 ರಂದು ಸಪ್ತಮಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಾಲೋತ್ಸವವು ರಾತ್ರಿ ಔಪಾಸನೆ ಪಾಕಿನಿ ಮಹೋತ್ಸವವೂ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. 22 ರಂದು ಅಷ್ಟಮಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಾಲೋತ್ಸವವು ರಾತ್ರಿ ಔಪಾಸನೆ ಶೇಷಹೋಮ, ನಾಕಬಲಿ, ಹೊಳಲು ಸುತ್ತುವುದು ಗಜಾರೋಹಣ ಪೂಜೆ, ಗೃಹಪ್ರವೇಶ ಮಹೋತ್ಸವ ಹಾಗೂ 23ರಂದು ನವಮಿ ಪ್ರಾತಃಕಾಲ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ ಆನಂತರ ಸ್ಥಂಭ ಪೂಜಾ ರಾತ್ರಿ ಪುμÁ್ಪಂದೋಳಿಕೋತ್ಸವ, ಶಯನೋತ್ಸವವೂ ನಡೆಯುತ್ತದೆ.
ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಾಲಯ ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮಹೋತ್ಸವದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಪ್ರತಿದಿನ ಸಂಜೆ ಸಂಗೀತ, ಹರಿಕಥೆ, ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



























