Home ಮುಖಪುಟ ಸುದ್ದಿ ವಿಲ್ ರದ್ದತಿಗೆ ೩ ವರ್ಷ ಕಾಲಮಿತಿ

ವಿಲ್ ರದ್ದತಿಗೆ ೩ ವರ್ಷ ಕಾಲಮಿತಿ

ನವದೆಹಲಿ,ಜೂ. ೧೨: ವಿಲ್ (ಮರಣಶಾಸನ) ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಭಾರತೀಯ ಉತ್ತರಾಧಿಕಾರ ಕಾಯ್ದೆಯಲ್ಲಿ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಹಾಗಾಗಿ, ಇಂತಹ ಪ್ರಕರಣಗಳಿಗೆ ಕಾಲಮಿತಿ ಕಾಯ್ದೆಯ ಆರ್ಟಿಕಲ್ ೧೩೭ ಅನ್ವಯವಾಗಲಿದ್ದು, ೩ ವರ್ಷಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜಸ್ಟಿಸ್ ಸಂಜಯ್ ಕರೋಲ್ ಮತ್ತು ಜಸ್ಟಿಸ್ ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಈ ಆದೇಶ ನೀಡಿದೆ. ಧೀರಾಜ್ ದತ್ತಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ೧೯೯೫ರಲ್ಲಿ ನೀಡಲಾಗಿದ್ದ ವಿಲ್ ಅನ್ನು ರದ್ದುಗೊಳಿಸುವಂತೆ ಕೋರಿ ೨೦೨೨ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯು ಕಾಲಮಿತಿ ಮೀರಿದೆ ಎಂದು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ:ಗೌರಿಪ್ರೋವಾ ಸೇನ್ ಎಂಬುವರು ತಮಗೆ ಸೇರಿದ ಆಸ್ತಿಯನ್ನು ಸೋದರಸಂಬಂಧಿ ಧೀರಾಜ್ ದತ್ತಾ ಅವರಿಗೆ ಹಸ್ತಾಂತರಿಸಲು ೧೯೮೯ರ ಜುಲೈನಲ್ಲಿ ವಿಲ್ ಬರೆದಿದ್ದರು. ಅಕ್ಟೋಬರ್ ೧೯೮೯ರಲ್ಲಿ ಅವರು ನಿಧನರಾದ ನಂತರ, ಧೀರಾಜ್ ದತ್ತಾ ಅವರಿಗೆ ಸೆಪ್ಟೆಂಬರ್ ೧೯೯೫ರಲ್ಲಿ ನ್ಯಾಯಾಲಯದಿಂದ ವಿಲ್ ಮಂಜೂರಾಗಿತ್ತು. ತದನಂತರ, ಧೀರಾಜ್ ದತ್ತಾ ಅವರು ಕಂದಾಯ ದಾಖಲೆಗಳಲ್ಲಿ ಖಾತೆ ಬದಲಾವಣೆಗೆ (ಮ್ಯುಟೇಷನ್) ಪ್ರಕ್ರಿಯೆ ಆರಂಭಿಸಿದ್ದರು.


ಅರ್ಜಿದಾರರು ತಮಗೆ ೨೦೧೯ರಲ್ಲಷ್ಟೇ ಬಗ್ಗೆ ತಿಳಿಯಿತು ಎಂದು ವಾದಿಸಿ, ೨೦೨೨ರಲ್ಲಿ ವಿಲ್ ರದ್ದತಿಗಾಗಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಹೇಳಿದ್ದೇನು? ಕಾನೂನು ನೋಟಿಸ್ ನಿರ್ಲಕ್ಷಿಸುವಂತಿಲ್ಲ: ೨೦೧೩ರಲ್ಲೇ ಕಂದಾಯ ದಾಖಲೆಗಳ ಬದಲಾವಣೆಗೆ ಸಂಬಂಧಿಸಿದಂತೆ ಎದುರುದಾರರಿಗೆ ನೋಟಿಸ್ ಜಾರಿಯಾಗಿತ್ತು. ನ್ಯಾಯಾಲಯ ಅಥವಾ ಕಾನೂನು ಸಂಸ್ಥೆಯಿಂದ ನೋಟಿಸ್ ಬಂದಾಗ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಅದರ ಹಿನ್ನೆಲೆಯನ್ನು ವಿಚಾರಿಸಬೇಕು. ಅದನ್ನು ಬಿಟ್ಟು ಸುಮ್ಮನಿದ್ದು, ಆನಂತರ “ನಮಗೆ ಮಾಹಿತಿ ಇರಲಿಲ್ಲ” ಎಂದು ಹೇಳಲು ಸಾಧ್ಯವಿಲ್ಲ.


ಪರೋಕ್ಷ ತಿಳುವಳಿಕೆ ೨೦೧೩ರ ನೋಟಿಸ್ ಅನ್ನು ’ಪರೋಕ್ಷ ತಿಳುವಳಿಕೆ’ ಎಂದು ಪರಿಗಣಿಸಬೇಕು. ಆ ದಿನದಿಂದಲೇ ಕಾಲಮಿತಿ ಆರಂಭವಾಗುತ್ತದೆ. ೩ ವರ್ಷಗಳ ಮಿತಿ: ಭಾರತೀಯ ಉತ್ತರಾಧಿಕಾರ ಕಾಯ್ದೆಯಲ್ಲಿ ಕಾಲಮಿತಿ ಇಲ್ಲದ ಕಾರಣ, ಕಾಲಮಿತಿ ಕಾಯ್ದೆಯ ಆರ್ಟಿಕಲ್ ೧೩೭ರ ಪ್ರಕಾರ ಹಕ್ಕು ಉದ್ಭವಿಸಿದ ೩ ವರ್ಷಗಳೊಳಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕರಣದಲ್ಲಿ ೨೦೧೩ ರಿಂದ ೩ ವರ್ಷಗಳ ಮಿತಿ ಅನ್ವಯವಾಗುವುದರಿಂದ, ೨೦೨೨ರಲ್ಲಿ ಸಲ್ಲಿಕೆಯಾದ ಅರ್ಜಿ ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ಕೋರ್ಟ್