
ನವಲಗುಂದ,ಆ೨೭: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೂ ೩೦ರಿಂದ ಆ ೨೫ರವರೆಗೆ ಜರುಗಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವಿಧಾನಸಭಾ ಕ್ಷೇತ್ರದಾದ್ಯಂತ ಈ ಹಿಂದೆ ೨೧೫೯೬೨ ಮತದಾರಲ್ಲಿ ೨೨೬೨೮ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಪ್ರಸ್ತುತ ೧೯೩೩೩೪ ಮತದಾರರನ್ನು ದೃಡಿಕೃತ ಗೊಳಿಸಲಾಗಿದೆ ಎಂದು ಕ್ಷೇತ್ರ ಮತದಾರರ ನೊಂದಣೆ ಅಧಿಕಾರಿ ಗೀತಾ ಹೊನಕೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ೩ ನೂರದಿಂದ ೧೨ನೂರರವಳಗಿನ ಸಂಖೆಯಲ್ಲಿರು ಮತಗಟ್ಟೆಗಳನ್ನು ಗುರಿತಿಸಲಾಗಿದ್ದು ಹೆಚ್ಚು ಮತದಾರರು ಕಂಡು ಬಂದ ಮತಗಟ್ಟೆಗಳನ್ನು ಗುರುತಿಸಿ ಹೆಚ್ಚುವರಿಸಯಾಗಿ ೮ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ.
ಈ ಹಿಂದೆ ಕ್ಷೆತ್ರದಲ್ಲಿ ೨೩೪ ಮತಗಟ್ಟೆಗಳಿದ್ದು ಪ್ರಸ್ತುತ ೮ ಮತಗಟ್ಟೆಗಳು ಹೆಚ್ಚಿಗೆಯಾಗಿದ್ದು ಒಟ್ಟಾರೆ ೨೪೨ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದ ಅವರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರ ಕ್ಷೇತ್ರದಲ್ಲಿ ೯೭೭೧೫ ಪುರುಷ ಮತದಾರರು, ೯೫೬೧೧ ಮಹಿಳಾ ಮತದಾರರಿದ್ದು ಇತರೆ ೮ ಮತದಾರರನ್ನು ಸೇರಿ ಒಟ್ಟು ೧೯೩೩೩೪ ಮತದಾರರಿದ್ದಾರೆಂದು ವಿವರಿಸಿದರು.
ಆ ೨೪ರಿಂದ ಆರಂಭಗೊAಡು ಸೆ,೨೩ರವರೆಗೆ ಮಕ್ತಾಯಗೊಳ್ಳುವಂತೆ ಹಕ್ಕು ಮತ್ತು ಅಕ್ಷೇಪಣೆ ಅವಧಿಯಲ್ಲಿ ಸಂಬAಧಿಸಿದ ಮತದಾರರು ನಮೂನೆ-೬ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣೆಗೆ ಅವಕಾಶವಿದ್ದು, ಮತದಾರರ ಸಮಗ್ರ ಪರಿಷ್ಕರಣೆ ೨೦೨೬ ಮತಗಟ್ಟೆ ಅಧಿಕಾರಿಗಳು ಮನೆ,ಮನೆ ಭೇಟಿ ನೀಡಿದ ಸಂದರ್ಭದಲ್ಲಿ ವಿಳಾಸ ಲಭ್ಯವಿರದ ಹಾಗೂ ಬೇರೆಕಡೆ ವಾಸವಾಗಿರುವ ಮತದಾರರು ದೇಶದ ಕಾಯಂ ರಹವಾಸಿಯಗಿರುವ ಮತದಾರರು,ಆ೨೪ರಂದು ಚುನಾವಣಾ ಆಯೋಗ ಪ್ರಸಿದ್ದಿ ಪಡಿಸಿದ ಕರಡು ಮತದಾರರ ಪಟ್ಟಿಯಲ್ಲಿ ನೊಂದಣೆಯಾಗದೇ ಇರುವ ಅರ್ಹ ಮತದಾರರು ಹಾಗೂ ೧-೧೦.೨೦೨೬ಕ್ಕೆ ೧೮ ವರ್ಷ ಪೂರ್ಣಗೊಳ್ಳಲಿರುವ ಮತದಾರರು ತಮ್ಮ ವ್ಯಾಪ್ತಿಯ ನೊಂದಣೆ ಅಧಿಕಾರಿಗಳಿಗೆ ನಮೂನೆ-೬ರಲ್ಲಿ ನೊಂದಣೆಗೆ ಅರ್ಜಿಸ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಚುನಾವಣಾಧಿಕಾರಿ ಹೊನಕೇರಿ
ವಿಧಾನಸಭಾ ಕ್ಷೇತ್ರದಲ್ಲಿ ಶೇ೧೦೦ರಷ್ಟು ಎನ್‌ವೈರಮೆಂಟ್ ಫಾರ್ಮಗಳನ್ನು ವಿತರಿಸಲಾಗಿದ್ದು ಅದರಲ್ಲಿ ಶೇ೮೯.೫೨ ರಷ್ಟು ವಾಪಸ್ ಪಡೆಯಲಾಗಿದ್ದು, ಶೇ೧೦ರಷ್ಟು ಮತದಾರರು ವಿಳಾಸದಲ್ಲಿ ವಾಸವಿರದಿರುವುದು ಅಥವಾ ಬೇರೆಕಡೆ ಸ್ಥಳಾಂತರಗೊAಡಿದ್ದು ಹಾಗೂ ಮರಣ ಹೊಂದಿದ ಮತದಾರರಿದ್ದು ಒಟ್ಟಾರೆ ಕ್ಷೇತ್ರದಾದ್ಯಂತ ೨೨೬೨೮ ಮತದಾರರನ್ನು ಕೈಬಿಡಲಾಗಿದೆ ಎಂದು ವಿವರಿಸಿದರು.
ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಗಣೇಶ ಚಳ್ಳಕೆರೆ, ರಾಷ್ಟಿçÃಯ ಪಕ್ಷದ ಬಿ ಎಲ್ ಒ ಗಳಾದ ಮೌಲಾಸಾಬ ವೈದ್ಯ, ಹುಸೇನಸಾಬ ಕೊಡ್ಲಿವಾಡ, ಮುದ್ದಣ್ಣ ನಡುವಿನಮನಿ ಇತರರು ಇದ್ದರು






























