
ಹಾನಗಲ್ ತಾಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ವಿದ್ಯುತ್ ಮೂಲಸೌಕರ್ಯ ಬಲಪಡಿಸುವುದು ಸೇರಿದಂತೆ ವಿವಿಧ ವಿದ್ಯುತ್ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಂತೆ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಅವರು ಗುರುವಾರ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ನಿರ್ದೇಶಕ (ಯೋಜನೆಗಳು) ಜಯಕುಮಾರ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಹಾವೇರಿಯ ಕೆಪಿಟಿಸಿಎಲ್ ಯೋಜನೆಗಳ ವಿಭಾಗದ ಇಇ ರುದ್ರಮುನಿ, ಹಾನಗಲ್ ಹೆಸ್ಕಾಂ ಎಇಇ ವಿ.ಎಸ್.ಮರಿಗೌಡ್ರ ಇದ್ದರು.






















