
ಮಜ್ಜಿಗುಡ್ಡ ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ವಾರ್ಷಿಕೋತ್ಸವ ಗೋಪುರದ ಅಡಿಗಲ್ಲು ಕಾರ್ಯಕ್ರಮದ ಸಾನಿಧ್ಯ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮಿಗಳು ದಾಸೋಹಮಠ ಅಣ್ಣಿಗೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ್ ಬ. ದಾಡಿಬಾವಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳು ಧಾರ್ಮಿಕ ಪರಂಪರೆಯ ಶ್ರದ್ಧಾ ಕೇಂದ್ರಗಳಾಗಿ ದೇಶದ ಧರ್ಮದ ಸಂಸ್ಕöÈತಿಯ ಪ್ರತೀಕವಾಗಿವೆ. ಧರ್ಮ ಕಾರ್ಯದಿಂದ ಮನಸ್ಸು ನೆಮ್ಮದಿಯಾಗುವುದು ಎಂದರು. ಮುಖಂಡರಾದ ಅಜ್ಜಪ್ಪ ಗುಡ್ಡದ, ಚಂಬಣ್ಣ ಸುರಕೋಡ, ಎಸ್. ಪಿ. ಪಾಟೀಲ್, ಗಿರಿಜಮ್ಮ ಅಕ್ಕಿ, ಬಸವಣ್ಣವ್ವ ಜಲೆಗಾರ, ಗೂಳಪ್ಪ ಶೆಟ್ಟಿಕೆರೆ, ಬಸವರಾಜ ಶೆಟ್ಟಿಕೆರಿ, ಮಹಾಬಲೇಶ್ವರ ಹೇಬಸೂರ, ಬಸವಲಿಂಗಯ್ಯ ಹಿರೇಮಠ, ಗ್ರಾಮದ ತಾಯಂದಿರು ಗುರು ಹಿರಿಯರು ಯುವಕರು ಉಪಸ್ಥಿತರಿದ್ದರು.
























