
ಕಲಬುರಗಿ:ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ವತಿಯಿಂದ ನೀಡುವ ಶರಣ ಸಂಸ್ಕøತಿ ಪ್ರಸಾರಕ್ಕಾಗಿ ನೀಡುವ ರಾಜ್ಯಮಟ್ಟದ ರಮಣಶ್ರೀ ಪ್ರಶಸ್ತಿಗೆ ಕಲಬುರಗಿ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಮಾಲೀಕರು ಮತ್ತು ಪ್ರಕಾಶಕರಾದ ಡಾ. ಬಸವರಾಜ ಕೊನೆಕ್ ಅವರನ್ನು ಆಯ್ಕೆ ಮಾಡಲಾಗಿದ್ದು ಇದೇ ತಿಂಗಳು 17 ರಂದು ಬೆಂಗಳೂರಿನ ರಮಣಶ್ರೀ ಹೋಟೆಲನಲ್ಲಿ ನಡೆಯುವ
ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಅವರು ತಿಳಿಸಿದ್ದಾರೆ.
ಡಾ. ಬಸವರಾಜ ಕೊನೇಕ್ ಅವರು ಕಳೆದ 58 ವರ್ಷಗಳಿಂದ ಪುಸ್ತಕ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ್ದಲ್ಲದೆ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸುವುದರ ಮೂಲಕ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನು ಕಾಯಕ ದಿನಾಚರಣೆಯೆಂದು ಆಚರಿಸಿ ಅವರ ಧರ್ಮಪತ್ನಿಯ ಹೆಸರಲ್ಲಿ ಬಸವ ಸಿರಿ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಿದ್ದು ವಿಶೇಷ ಅಲ್ಲದೆ ತಮ್ಮ ಪ್ರಕಾಶನದಿಂದ ಈಗಾಗಲೇ 3700ಕ್ಕೂ ಹೆಚ್ಚು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿ ಹಲವಾರು ಬರಹಗಾರರಿಗೆ, ಸಾಹಿತಿಗಳಿಗೆ ಪೆÇ್ರೀತ್ಸಾಹವನ್ನು ನೀಡುವಲ್ಲಿ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಸಾಹಿತಿಗಳನ್ನು ಗುರುತಿಸುವಲ್ಲಿ ಮಹತ್ತರ ಕೆಲಸ ಮಾಡಿದ್ದು ಗಮನಿಸಿದ ಶ್ರೀ ಶರಣಬಸವ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಲ್ಲದೆ ಲಂಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡನಲ್ಲಿ ಹೆಸರು ಸೇರ್ಪಡೆಗೊಂಡಿದೆ.ಈ ಸಾಧನೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಕಲಬುರಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಸೇರಿದಂತೆ ಪ್ರಕಾಶನ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ಡಾ. ಗವಿಸಿದ್ದಪ್ಪ ಪಾಟೀಲ್, ಡಾ. ಸ್ವಾಮೀರಾವ ಕುಲಕರ್ಣಿ, ಡಾ. ಶಿವರಾಜ ಪಾಟೀಲ, ಡಾ.ಮೀನಾಕ್ಷಿ ಬಾಳಿ, ಡಾ. ಜಯದೇವಿ ಗಾಯಕವಾಡ್, ಡಾ.ಚಿ.ಸಿ.ನಿಂಗಣ್ಣ ಡಾ. ಶರಣಬಸಪ್ಪ ವಡ್ಡನಕೇರಿ, ಡಾ.ಕಾವ್ಯಶ್ರೀ ಮಹಾಗಾಂವಕರ್ ಅವರು ಅಭಿನಂದಿಸಿದ್ದಾರೆ.





















