
ಕಲಬುರಗಿ:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಮರಿಯಾ ಮೊಂಟೆಸರಿ 156ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಡಾ. ಸಂಜನಾ ದೇವರಮನಿ ಮಕ್ಕಳನ್ನುದ್ದೇಶಿಸಿ ಮರಿಯಾ ಮೊಂಟೆಸರಿಯ ಶಿಕ್ಷಣ ಪದ್ದತಿ ಅತಿ ಮುಖ್ಯ ಈ ಪದ್ದತಿ ಕಲಬುರಗಿಯಲ್ಲಿ ಎಸ್‍ಬಿಆರ್ ಶಾಲೆಯಲ್ಲಿ ಮಾತ್ರ ಪೂಜ್ಯ ಅಪ್ಪಾ ಅವರ ಕನಸಿನ ಶಾಲೆಯಾಗಿದೆ. ಈ ಶಿಕ್ಷಣ ಪದ್ದತಿಯಲ್ಲಿ ಮಕ್ಕಳು ಸಿಸ್ತು, ಸಹನೆ, ಸಹಬಾಳ್ವೆ ಮುಂದಿನ ಶಿಕ್ಷಣಕ್ಕೆ ಬೇಕಾಗಿರುವ ಕೆಲವು ಅಂಶಗಳು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಕಲಿತಂತಹ ಮಕ್ಕಳು ಉನ್ನತ ಶಿಕ್ಷಣದಲ್ಲಿ ಉತ್ತುಂಗ ಶಿಖರಕ್ಕೆ ಹೋಗುತ್ತಾರೆ ಎಂದು ನುಡಿದರು. ಅದೇ ರೀತಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ. ರೂಪಾ ಹೋಲ್ಕುಂಡೆ ಇವರು ಮೊಂಟೆಸರಿ ಶಿಕ್ಷಣ ಪದ್ದತಿ ಇಂದಿನ ಯುಗದ ಮಕ್ಕಳಿಗೆ ಅತಿ ಅವಶ್ಯಕತೆ ಇಲ್ಲಿ ಕಲಿತಂತಹ ಮಕ್ಕಳು ಹಲವಾರು ಕ್ಷೇತ್ರದಲ್ಲಿ ಮುಂಚುಣಿಯಲ್ಲಿದ್ದಾರೆ ಎಂದು ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಹೇಳಿದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ 9ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರು, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.































