Home ಜಿಲ್ಲೆ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಸಲಹೆ

ಕೃಷಿ ವಿಜ್ಞಾನಿಗಳಿಂದ ರೈತರಿಗೆ ಸಲಹೆ


ಚನ್ನಮ್ಮನ ಕಿತ್ತೂರ-೧೭ ಸಲೀಂ ಸಂಗತ್ರಾಸ್ ಉಪ ಕೃಷಿ ನಿರ್ದೇಶಕರು ಬೆಳಗಾವಿ, ಸಿ ಆಯ್ ಹೂಗಾರ ಸಹಾಯಕ ಕೃಷಿ ನಿರ್ದೇಶಕರು ಬೆಳಗಾವಿ ಹಾಗೂ ಎಸ್ ಎಸ್ ಹಿರೇಮಠ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಸಹಯೋಗದಲ್ಲಿ ಪೀಡೆ ಸರ್ವೇಕ್ಷಣಾ ತಂಡವು ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತು. ಸೋಯಾ-ಅವರೆ ಹಾಗೂ ಕಬ್ಬು ಬೆಳೆಗಳಲ್ಲಿ ಕಂಡು ಬಂದ ಕೀಟ ಮತ್ತು ರೋಗಗಳ ಕುರಿತು ರೈತರಿಗೆ ಸಲಹೆ ನೀಡಿದರು.


.ಸೋಯಾ-ಅವರೆ : ಕಾಂಡ ಕೊರೆಯುವ ನೊಣದ ಬಾಧೆ ಕಂಡು ಬಂದಿದ್ದು, ಪ್ರತಿ ಲೀಟರ್ ನೀರಿಗೆ ೦.೩ ಗ್ರಾಂ ಥಯಾಮಿಥಾಕ್ಸಾಮ್ ೨೫ ಡಬ್ಲೂಜಿ ಅಥವಾ ಸಂಯುಕ್ತ ಕೀಟನಾಶಕಗಳಾದ ಥಯಾಮಿಥಾಕ್ಷಾಮ್ ೧೨.೬% + ಲ್ಯಾಮ್ಲಾ ಸೈಹೆಲೋಥೀನ್ ೯.೫% ೨೦ ಎಫ್. ಎಸ್. ಪ್ರತಿ ಲೀಟರ ನೀರಿಗೆ ೦.೨೫ ಮಿಲೀ ಬೆರೆಸಿ ಸಿಂಪಡಿಸಿ. ಸ್ಪೂಡಾಪ್ಟರಾ/ಹೆಲಿಕೋವರ್ಪಾ ಕಾಯಿ ತಿನ್ನುವ ಕೀಟಗಳು ಸಂಜೆಯ ಸಮಯದಲ್ಲಿ ಹೆಚ್ಚಾಗಿ ಹೊರಗೆ ಬಂದು ಬೆಳೆ ಹಾನಿ ಮಾಡುತ್ತವೆ ಆದ ಕಾರಣ ರೈತರು ನಿಗಾವಹಿಸಿ ಕೀಟಭಾದೆ ಕಂಡು ಬಂದ ತಕ್ಷಣ ನಿರ್ವಹಣೆಗೆ ೦.೨ ಮಿಲೀ. ಕ್ಲೋಯಾರ್‌ಂಟ್ರನಿಲಿಪ್ರೊಲ್ ೧೮.೫ ಎಸ್. ಸಿ. ಅಥವಾ ೦.೫ ಮಿಲೀ. ಲ್ಯಾಮಾ ಸೈಹೆಲೋಥೀನ್ ಅಥವಾ ೨ ಗ್ರಾಂ ಮೆಟರೈಜಿಯಂ ರಿಲೈ ಶಿಲೀಂದ್ರವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ೬ ಲಿಂಗಾಕ?Àðಕ ಮೋಹಕ ಬಲೆಗಳನ್ನು ಬೆಳೆಯ ಒಂದು ಅಡಿಗಿಂತ ಎತ್ತರದಲ್ಲಿನೇತುಹಾಕಬೇಕು.


ಕೀಟ ನಿರ್ವಹಣೆ ಜೊತೆಗೆ ಪ್ರತಿ ಲೀಟರ ನೀರಿಗೆ ೫ ಗ್ರಾಂ ನೀರಿನಲ್ಲಿ ಕರಗುವ ಎನ್‌ಪಿಕೆ ರಸಗೊಬ್ಬರಗಳಾದ ೧೯:೧೯:೧೯ ಅಥವಾ ೧೩:೦:೪೫ ಗಳನ್ನು ಬಳಸಬೇಕು.
ಕಬ್ಬು: Sಓಏ ೧೩೩೭೪ ಮತ್ತು Sಓಏ ೧೩೩೪೬ ಕಬ್ಬು ತಳಿಯಲ್ಲಿ ವಿಕೃತ ಕೊಳೆ ರೋಗ (ಪಕ್ಕಾ ಬೋಯಿಂಗ್) ಕಂಡು ಬಂದಿದ್ದು, ರೈತ ಬಾಂಧವರು ಸಂಯುಕ್ತ ಶಿಲೀಂದ್ರನಾಶಕ ಅಜೊಕ್ಸಿಸ್ಕೋಬಿನ್ ೧೮.೨% + ಡೈಫೆನ್ ಕೊನೊಜೊಲ್ ೧೧.೪ ಎಸ್. ಸಿ. ಪ್ರತಿ ಲೀಟರ ನೀರಿಗೆ ಒಂದು ಮಿಲೀ ಜೊತೆಗೆ ೫ ಗ್ರಾಂ ಡಿಎಪಿ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆ ಪ್ರದೇಶಕ್ಕೆ ಕನಿ?À್ಠ ೧೫೦ ರಿಂದ ೨೦೦ ಲೀಟರ ಸಿಂಪರಣಾ ದ್ರಾವಣ ಬಳಸಬೇಕು. ಸಿಂಪರಣೆ ಮಾಡುವವರು ತಪ್ಪದೇ ರಕ್ಷಾ ಕವಚ ಧರಿಸಬೇಕು.


ಬಿಳಿ ಉಣ್ಣೆ ಸಮಗ್ರ ನಿರ್ವಹಣೆಗೆ ಸಾರಜನಕಯುಕ್ತ ರಸಗೊಬ್ಬರವನ್ನು ಸಮತೋಲನ ಪ್ರಮಾಣದಲ್ಲಿ ಬಳಸುವುದು. ಗದ್ದೆಯಲ್ಲಿ ನೀರು ನಿಲ್ಲದೆ ಬಸಿದು ಹೋಗುವಂತೆ ವ್ಯವಸ್ಥೆ ಮಾಡುವುದು. ಪ್ರತಿ ಲೀಟರ ನೀರಿಗೆ ೧ ಗ್ರಾಂ ಅಸಿಫೆಟ್ ೭೫ ಡಬ್ಲೂಪಿ ಅಥವಾ ೨ಮಿಲೀ. ಕ್ಲೋರ್‌ಪೈರಿಫಾಸ್ ೨೦ಇ. ಸಿ. ಕೀಟನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು ೪೦೦ ಲೀಟರ ಸಿಂಪರಣಾ ದ್ರಾವಣ ಬೇಕಾಗುತ್ತದೆ.
ತುಕ್ಕು ರೋಗದ ನಿರ್ವಹಣೆಗೆ ಪ್ರಾಪಿಕೊನಾಜೋಲ್ ೧mಟ ಹಾಗೂ ೫ ಗ್ರಾಂ ೧೩.೦.೪೫ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಮಂಜುನಾಥ ಕೆಂಚರಾಹುತ ಹಾಗೂ ಎಸ್ ಈ ನಿಂಬಲಗುAಡಿ, ಶಶಿಧರ್ ಪಟ್ಟಣಶೆಟ್ಟಿ, ಬಸವರಾಜ ಭದ್ರಶೆಟ್ಟಿ, ವಿಶಾಲ ಅರಳಿಮರದ, ಶಶಿಧರ್ ಕೊಡ್ಲಿ ಹಾಗೂ ರೈತರು ಹಾಜರಿದ್ದರು.