
ಶಾಸಕರ ಅನುದಾನದಡಿಯಲ್ಲಿ ಇಸಿಜಿ ಯಂತ್ರ ವಿತರಣಾ ಕಾರ್ಯಕ್ರಮ ಹಾಗೂ ಶಾಸಕರ ಸ್ಥಳೀಯರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ೧೨ ಆಸ್ಪತ್ರೆಗಳಿಗೆ ಇಸಿಜಿ ಮಶೀನ್ ವಿತರಣೆ ಹಾಗೂ ಹೃದಯ ರೋಗದ ಅರಿವು ಕಾರ್ಯಕ್ರಮಕ್ಕೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ನಗರದ ಪಾಲಿಕೆ ಆವರಣದಲ್ಲಿರುವ ಕಛೇರಿಯಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ, ಪಾಲಿಕೆ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ, ಡಿಎಚ್‌ಓ ಪರಶುರಾಮ, ಡಾ. ಅಮಿತ್ ಸತ್ತೂರ, ವೈದ್ಯಾದಿಕಾರಿಗಳು ಉಪಸ್ಥಿತರಿದ್ದರು.





























