ಕಾಂಗ್ರೆಸ್ ಪಕ್ಷದ ಹಿರಿಯರೂ, ವಿಧಾನ ಪರಿಷತ್ ಸದಸ್ಯರಾದ ಬಿ. ಕೆ. ಹರಿಪ್ರಸಾದ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬೆಂಗಳೂರ ಸದಾಶಿವ ನಗರದಲ್ಲಿರುವಅವರ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಧಾರವಾಡ ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾದ ಸತೀಶ ಮೇಹರವಾಡೆ ಅವರ ನೇತೃತ್ವದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಗಂಗಾಧರ ದೊಡವಾಡ, ಮಹೇಶ ದಾಬಡೆ, ವಿಶ್ವನಾಥ ಮೆಹರವಾಡೆ, ಗಿರೀಶ ಮಲೆನಾಡು, ಅರವಿಂದ ಮೆಹರವಾಡೆ, ರಘು ಅರಸಿದ್ದ, ಇರ್ಫಾನ್, ರಘು ಉಪಾಧ್ಯಾಯ, ರಘುನಾಥ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.