Home ಜಿಲ್ಲೆ ಹಿರೇಬೆಣಕಲ್ನ ಮೋರೆರ್ ಗುಡ್ಡಕ್ಕೆ ರೋಪ್ ವೇ ಕಲ್ಪಿಸಲು ಸಿಎಂಗೆ ಜನಾರ್ಧನರೆಡ್ಡಿ ಮನವಿ

ಹಿರೇಬೆಣಕಲ್ನ ಮೋರೆರ್ ಗುಡ್ಡಕ್ಕೆ ರೋಪ್ ವೇ ಕಲ್ಪಿಸಲು ಸಿಎಂಗೆ ಜನಾರ್ಧನರೆಡ್ಡಿ ಮನವಿ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಸೆ,27- ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ  ಹಿರೇಬೆಣಕಲ್ನ ಮೋರೆರ್ ಗುಡ್ಡದ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು, ಪ್ರವಾಸಿಗರಿಗೆ ಸುಲಭ ಹಾಗೂ ಸುರಕ್ಷಿತವಾಗಿ ಈ ತಾಣವನ್ನು ವೀಕ್ಷಿಸಲು ಅನುಕೂಲವಾಗುವಂತೆ ರೋಪ್ವೇ ಹಾಗೂ ಹೆಲಿಪ್ಯಾಡ್ ಸೇರಿದಂತೆ ಅಗತ್ಯ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕ ಗಾಲಿ ಜನಾರ್ಧನರೆಡ್ಡಿ ಮನವಿ ಮಾಡಿದ್ದಾರೆ.

ಈ ಪ್ರದೇಶವನ್ನು ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು. ಇಲ್ಲಿ ಕಲ್ಲಿನಿಂದ ನಿರ್ಮಿಸಲಾದ ಪ್ರಾಚೀನ ಸಮಾಧಿ ರಚನೆಗಳು, ಬಂಡೆಗಳ ಮೇಲಿನ ಶಿಲಾಕೃತಿಗಳು, ಹಿಂದಿನ ತಲೆಮಾರುಗಳ ಬದುಕಿನ ಕುರುಹುಗಳು ಹಾಗೂ ಕಲ್ಲು-ಗುಡ್ಡಗಳಿಂದ ಕೂಡಿದ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುವುದು ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ ಮತ್ತು ಸೌಭಾಗ್ಯ.

 ಈ ಕಲ್ಲುಗಳು ಕೇವಲ ಕಲ್ಲುಗಳಲ್ಲ; ನಮ್ಮ ಪೂರ್ವಜರ ಬದುಕು, ಸಂಸ್ಕೃತಿ ಮತ್ತು ನಾಗರಿಕತೆಯ ಕಥೆಯನ್ನು ಸಾವಿರಾರು ವರ್ಷಗಳಿಂದ ನಮ್ಮೊಂದಿಗೆ ಮಾತನಾಡುತ್ತಿರುವ ಇತಿಹಾಸದ ಪುಟಗಳು.ಇಂತಹ ಅಪೂರ್ವ ಇತಿಹಾಸ ಮತ್ತು ಪಾರಂಪರ್ಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಪೂರ್ವಜರು ಬಿಟ್ಟುಹೋದ ಈ ಅಮೂಲ್ಯ ಪರಂಪರೆಯನ್ನು ಕೇವಲ ನಾವು ನೋಡಿಕೊಂಡು ಹೋಗುವುದಲ್ಲ; ಮುಂದಿನ ಪೀಳಿಗೆಯೂ ಹೆಮ್ಮೆಯಿಂದ ನೋಡಿ, ಅರಿತು, ಅನುಭವಿಸಬೇಕು. ದೇಶ-ವಿದೇಶಗಳಿಂದ ಪ್ರವಾಸಿಗರು ಹಾಗೂ ಇತಿಹಾಸಾಸಕ್ತರು ಇಲ್ಲಿಗೆ ಆಗಮಿಸುವಂತೆ ಈ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದಿದ್ದಾರೆ.