
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.25 ಸಂವಿಧಾನ ಮೂರು ಅಂಗಗಳ ಜೊತೆ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುವ ಪತ್ರಿಕಾ ರಂಗದಲ್ಲಿ ದುಡಿಯುವ ಪತ್ರಕರ್ತರಿಗೆ ಸರಕಾರದಿಂದ ಕನಿಷ್ಠ ಗೌರವಧನ ಸಿಗಬೇಕು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು
ಪಟ್ಟಣದ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಯಾರು ಸ್ಥಿತಿವಂತರಲ್ಲ ಅವರ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ಸರ್ಕಾರ ತಾಲೂಕು ಮಟ್ಟದ ವರದಿಗಾರರಿಗೆ ಗೌರವ ಧನ ಸಿಗುತ್ತಿಲ್ಲ. ಮುಂದಿನ ನಡೆಯುವ ಮಳೆಗಾಲ ಅಧಿವೇಶನದಲ್ಲಿ ಇದರ ಬಗ್ಗೆ ಗಮನ ಸೆಳೆಯುತ್ತೇನೆ. ತಾಲೂಕಿನ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.
ಸಂವಿಧಾನ ಬರೆದ ಅಂಬೇಡ್ಕರ್ರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟು ಚನ್ನಾಗಿದೆ ಎಂದರೆ ಅಂದಿನ ಬಸವಣ್ಣನವರ ಅನುಭವ ಮಂಟಪವೇ ಇದಕ್ಕೆ ಬುನಾದಿ ಆದ್ದರಿಂದ ವಿಧಾನ ಮಂಡಲದ ಸ್ಪೀಕರ್ ಸ್ಥಾನವಾಗಿದೆ. ಸಂವಿಧಾನ ಇರುವ ಮೀಸಲಾತಿ ಪಡೆದುಕೊಂಡ
ದಲಿತ ಶ್ರೀಮಂತರು ತಮ್ಮ ಮೀಸಲಾತಿ ಯನ್ನು ಬಡ ದಲಿತರಿಗೆ ಬಿಟ್ಟುಕೊಡಬೇಕು. ಹಾಗಾದಾಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಬುಡ್ಡಿ ಬಸವರಾಜ ಪ್ರಾಸ್ತವಿಕ ಮಾತನಾಡಿ ಪತ್ರಕರ್ತರು ಕೇವಲ ಐಡಿ ಕಾರ್ಡಿಗೋಸ್ಕರ ಪತ್ರಕರ್ತರಾಗಬಾರದು ಸಮಾಜದಲ್ಲಿನ ತುಳಿತಕ್ಕೊಳಗಾದವರು, ದೀನ ದಲಿತರು, ಅಸಹಾಯಕರು, ಬಡವರೆ ಬಗ್ಗೆ ಕಾಳಜಿ ಇಟ್ಟುಕೊಂಡು ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ” ಇದ್ದವರೆಲ್ಲಾ ಪತ್ರಕರ್ತರಾಗಿದ್ದಾರೆ. ಜನಪ್ರತಿನಿಧಿಗಳು ಸಾರ್ವಜನಿಕರು ಅಧಿಕಾರಿಗಳು ನಿಜವಾದ ಪತ್ರಕರ್ತರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾದರೆ ಮಾಧ್ಯಮ ಕ್ಷೇತ್ರಕ್ಕೆ ಚ್ಯುತಿ ಬರುತ್ತದೆ ಎಂದರು.ಉಪನ್ಯಾಸವನ್ನು ಬೀದರ್ ಜಿಲ್ಲೆಯ ಪ್ರಜಾವಾಣಿಯ ಹಿರಿಯ ವರದಿಗಾರರಾದ ಶಶಿಕಾಂತ್ ಎಸ್ ಶೆಂಬೆಳ್ಳೆ ಮಾತನಾಡಿ ಯಾರೂ ಸತ್ಯವಂತರಾಗಿ ಕೆಲಸ ಮಾಡುತ್ತಾರೋ ಅವರೇ ನಿಜವಾದ ಪತ್ರಕರ್ತರು ಸ್ವಾಭಿಮಾನಿ ಪತ್ರಕರ್ತರು ಬಂಡವಾಳ ಶಾಹಿಗಳ ಅಡಿಯಲ್ಲಿ ಎಂದೂ ಕೆಲಸ ಮಾಡುವುದಿಲ್ಲ. ಸಮಾಜದಲ್ಲಿ ಸಮಾನತೆ ಕಾಣುವವನೇ ನಿಜವಾದ ಪತ್ರಕರ್ತರ. ಒಂದು ನೀಟ್ ಪರೀಕ್ಷೆಯನ್ನು ಸರಿಯಾಗಿ ನಡೆಸಲಾಗದ ಸರ್ಕಾರ ಪ್ರಶ್ನೆ ಮಾಡಿದರೆ ಅವರನ್ನು ದೇಶದ್ರೋಹಿಗಳೆನ್ನುತ್ತದೆ. ನಮ್ಮ ಹಕ್ಕು ಕಸಿದುಕೊಳ್ಳು ದೈರ್ಯ ಯಾರಿಗೂ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷ ವಿಶ್ವನಾಥ ಭಾವಿಕಟ್ಟಿ ವಹಿಸಿದ್ದರು.
ಇದೇ ವೇಳೆ ಹಗಲಿರುಳು ದುಡಿಯುವ 40 ಮಹಿಳಾ ಹಿರಿಯಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ, ಟಿ.ಬಿ.ರಾಜು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಿ.ಶಿವಾನಂದ, ಬಿಇಒ ಎಸ್.ಎಸ್.ಜಗದೀಶ್, ಎಸ್ಎಲ್ಆರ್ ಸಿಬ್ಬಂದಿ ಭುಜಂಗರಾವ್,ತಾಲೂಕು ಸಂಘದ ಉಪಾಧ್ಯಕ್ಷ ಡಿ.ಭೀಮರಾಜ, ಪ್ರಧಾನ ಕಾರ್ಯದರ್ಶಿ ರಾಜವಲಿ ಗಡ್ಡದ್, ಖಜಾಂಚಿ ಅಕ್ಕಂಡಿ ಅಕ್ಕಂಡಿ ಬಸವರಾಜ ಸದಸ್ಯರಾದ ಜೆ.ನಾಗರಾಜ, ಮಂಜುನಾಥ ಪಟ್ಟಣಶೆಟ್ಟಿ, ವೀರೇಶ ಮಜ್ಜಿಗಿ, ಬಿ.ಕೆ.ಬಸವರಾಜ. ಜೆಡಿಎಸ್ ಕಾರ್ಯಕರ್ತ ಹೊಟೇಲ್ ಸಿದ್ದರಾಜು, ಜಿ.ಎಂ.ಜಗದೀಶ, ಬ್ಯಾಟಿ ನಾಗರಾಜ, ರಾಹುಲ್, ಮಹೇಂದ್ರ ಮಾಚಿ ಇತರರಿದ್ದರು ಕಾರ್ಯಕ್ರಮ ನಿರೂಪಣೆ ಅಶೋಕ್ ಉಪ್ಪಾರ, ಸ್ವಾಗತ ಉಮಾಪತಿ ಶೆಟ್ಟರ್ ನಿರ್ವಹಿಸಿದರು. ನಾಡಗೀತೆ ಮತ್ತು ರೈತ ಗೀತೆಯನ್ನು ಮಹಾಂತೇಶ್ ಮತ್ತು ತಂಡ ಅದ್ಭುತವಾಗಿ ಮೂಡಿ ಬಂದಿತು.





























