
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.21-ಕೊಆಪರೇಟಿವ್ ಸೊಸೈಟಿ ಸದಸ್ಯರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿ ಸಂಸ್ಥೆಯು ಎತ್ತರಕ್ಕೆ ಬೆಳೆಸುವುದು ನಿಮ್ಮ ಕರ್ತವ್ಯವಾಗಿದೆ. ಮಚೆರ್ಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕೆ ಸಂಸ್ಥೆಯಲ್ಲಿ ಇರುವ ಪ್ರತಿಯೊಬ್ಬರ ಶ್ರಮ ಬಹಳ ಮುಖ್ಯವಾಗಿದೆ ಎಂದು ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಲಿ ಅಧ್ಯಕ್ಷ ಬಿ.ಮಹೇಶ್‍ಕುಮಾರ್ ತಿಳಿಸಿದರು.
ನಗರದ ರಥದಬೀದಿಯಲ್ಲಿರುವ ಚೌಡೇಶ್ವರಿ ಕಾಂಪ್ಲೆಕ್ಸ್‍ನ ಮೊದಲನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಚೆರ್ಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಕಛೇರಿಯಲ್ಲಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಸ್ಥೆಯು ಪ್ರಾರಂಭವಾಗಿ 11 ವರ್ಷಗಳು ಕಳೆದಿದೆ. ಅಂದಿನ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್ ಸಂಸ್ಥೆಯನ್ನು ಉದ್ಘಾಟನೆ ಮಾಡಿದರು. ಅವರ ನೆನಪು ನಮ್ಮ ಸಂಸ್ಥೆಯ ಸದಸ್ಯರು ಮರೆಯುವುದಿಲ್ಲ ಆಗಿನ ಅಧ್ಯಕ್ಷರಾಗಿದ್ದ ದಿ. ಎ.ಜಯಸಿಂಹ ಅವರು ಸಂಸ್ಥೆಯನ್ನು ಬೆಳೆಸಿದರು ಎಂದು ಹೇಳಿದರು.
ನಾನು ಅಧ್ಯಕ್ಷನಾದ ಮೇಲೆ ಸದಸ್ಯರು ಹಾಗೂ ನಿರ್ದೇಶಕರು ಕೈಜೋಡಿಸಿ ಉತ್ತಮಟ್ಟಕ್ಕೆ ಬೆಳೆಸಿದ್ದೇವೆ.ಒಬ್ಬರಿಗಾಗಿ ಎಲ್ಲರೂ ಎಲ್ಲಾರಿಗಾಗಿ ಒಬ್ಬರು ಎನುವ ಗುರಿಯನ್ನು ಇಟ್ಟಿಕೊಂಡು ಸೇವೆ ಸಲ್ಲಿಸಬೇಕು, ನಮ್ಮ ಸೊಸೈಟಿಯಿಂದ ಹಲವಾರು ಬಡ ಕುಟುಂಬಗಳು ಸಾಲ ಪಡೆದು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ತರುವ ನಿಟ್ಟಿನಲ್ಲಿ ಸಂಸ್ಥೆಯ ಅಭಿವೃದ್ದಿಗೆ ಶ್ರಮಿಸಬೇಕು. ಪಡೆಯುವವರಿಗೆ ಮುಂದೆ ಹೊಸ ಸೌಲಭ್ಯ ಸಾಲ ನೀಡುವಾಗ ಹೊಸ ಸಾಪ್ಟ್‍ವೇರ್ ಬಳಸಲು ಮುಂದಾಗಿದೆ ಎಂದರು.
ಗ್ರಾವಿಟಿ ಸೈನ್ಸ್ ಫೌಡೇಷನ್ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಅಭಿಷೇಕ್ ಮಾತನಾಡಿ, ಯಾವುದೇ ವಸ್ತುಗಳನ್ನು ಒಂದು ಕಡೆ ಕೂಡಿಸಿದರೆ ತೂಕ ಹೆಚ್ಚುತ್ತದೆ. ಅದೇ ತರ ಸೊಸೈಟಿಯ ಸದಸ್ಯರು ಒಟ್ಟಿಗೆ ಸೇರಿ ಷೇರು ಹಣವನ್ನು ಹೆಚ್ಚು ಹೆಚ್ಚು ಮಾಡಿದರೆ ಸಂಸ್ಥೆಯು ಎತ್ತರಕ್ಕೆ ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಲೆಕ್ಕಪರಿಶೋಧಕರಾದ ಸಂತೋಷ್.ಜೆ ಮಾತನಾಡಿ ಕೇಂದ್ರ ಸರ್ಕಾರದ ಅದೇಶದ ಮೇರೆಗೆ ಪ್ರತಿವರ್ಷವು ಆಡಿಟ್ ಮಾಡಿಸುವುದು ಕಡ್ಡಾಯ. ಸಂಸ್ಥೆಯಲ್ಲಿ ಪ್ರತಿಯೊಂದು ಲೆಕ್ಕಗಳು ಆಡಿಟ್‍ನಲ್ಲಿ ಸಿಗಲಿದೆ. ಯಾರಿಗೂ ಮೋಸವಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಿದರು.
ಸಂಸ್ಥೆಯ ಕಾನೂನು ಸಲಹೆಗಾರರಾದ ವಕೀಲರಾದ ಸಿದ್ದರಾಜು ಅವರು ಮಾತನಾಡಿ, ಸಾಲವನ್ನು ಸಂಸ್ಥೆಗೆ ರಿಕವರಿ ಮಾಡಲು ಯಲ್ಲರೂ ಕೈಜೋಡಿಸಬೇಕು. ಸಾಲವನ್ನು ಪಡೆದವರು ಸಕಾಲಕ್ಕೆ ಅದನ್ನು ಪಾವತಿಸಬೇಕು. ಸಂಸ್ಥೆಯಲ್ಲಿ ನೀಡುವ ಸಾಲ ಪ್ರತಿಯೊಬ್ಬ ಸದಸ್ಯನಿಗೆ ಸೇರಿದ್ದು ಅದು ಇನ್ನೊಬ್ಬರಿಗೂ ಉಪಯೋಗವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಗೆ ಶ್ರಮಿಸಿದ ಗಣ್ಯರನ್ನು ಗೌರವಿಸಲಾಯಿತು. ನಿರ್ದೇಶಕರಾದ ರಾಜು ವರ್ಗೀಸ್, ರಂಗಸ್ವಾಮಿ.ಸಿ, ಬಿ.ವಿ.ಶ್ರೀನಾಥ್, ಶಿವಣ್ಣ.ಎಸ್, ವಿಜಯಕುಲಾಲ್, ಪಣಿರಾಜ್.ಟಿ.ಎನ್, ಎಸ್.ಸುರೇಶ್, ಸೈಯದ್ ಅಲ್ತಾಫ್, ವೆಂಕಟರಾವ್, ಶೋಭಕುಮಾರಿ.ಎನ್, ಸುಮೀತ್ರ.ಪಿ, ವರ್ಷ.ಜೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜಲಿ, ಸಹಾಯಕರಾದ ನಾಗರಾಜು.ಎಂ.ಎನ್ ಇದ್ದರು.


































