Home ಜಿಲ್ಲೆ ಮೈಸೂರು ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಸೆ.21:-
ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಮಾಜಿ ಶಾಸಕರಾದ ಕೆ.ಮಹದೇವ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ವತಿಯಿಂದ ವಿವಿಧ ಸಂಘಟನೆಗಳೊಂದಿಗೆ ಪಿರಿಯಾಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.


ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿರುವ ಮಂಜುನಾಥ ಸಮುದಾಯ ಭವನದಿಂದ ಬೆಟ್ಟದಪುರ ಸರ್ಕಲ್ ಮಾರ್ಗವಾಗಿ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು ಈ ವೇಳೆ ದಾರಿಯುದಕ್ಕೂ ಶಾಸಕರ ಆಡಳಿತ ನಿರ್ಲಕ್ಷ ಮತ್ತು ತಾಲೂಕು ಆಡಳಿತ ವೈಫಲ್ಯ ಕುರಿತು ಘೋಷಣೆಗಳನ್ನು ಕೂಗಿ ಶೀಘ್ರ ಬರಪೀಡಿತ ತಾಲೂಕು ಘೋಷಿಸುವಂತೆ ಘೋಷಣೆಗಳನ್ನು ಕೂಗಿ ತಾಲೂಕು ಆಡಳಿತ ಭವನ ಬಳಿ ಸಾಗಿ ತಹಶೀಲ್ದಾರ್ ನಿಸರ್ಗ ಪ್ರಿಯ ಅವರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಲಾಯಿತು, ಪಿರಿಯಾಪಟ್ಟಣ ಪೆÇಲೀಸರು ಬಂದೋಬಸ್ತ್ ಒದಗಿಸಿದ್ದರು.


ಈ ವೇಳೆ ಮಾಜಿ ಶಾಸಕರಾದ ಕೆ.ಮಹದೇವ್ ಮಾತನಾಡಿ ಬರಪೀಡಿತ ತಾಲೂಕು ಘೋಷಣೆ ವಿಚಾರವಾಗಿ ಸರ್ಕಾರದಿಂದ ಈ ತಾಲ್ಲೂಕಿನ ರೈತರಿಗೆ ಅನ್ಯಾಯವಾಗಿದೆ, ತಾಲ್ಲೂಕಿನ ಬರ ಪರಿಸ್ಥಿತಿ ಬಗ್ಗೆ ಶಾಸಕರು ಸಂಬಂಧಪಟ್ಟ ಮಂತ್ರಿಗಳಿಗೆ ಮನದಟ್ಟು ಮಾಡುವಲ್ಲಿ ವಿಫಲರಾಗಿದ್ದಾರೆ ಕೂಡಲೇ ಪಿರಿಯಾಪಟ್ಟಣ ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಬೇಕು, ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರನ್ನು ಕರೆತಂದು ತಾಲ್ಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ 295 ಕೋಟಿ ಯೋಜನೆಯನ್ನು ಉದ್ಘಾಟನೆ ಮಾಡಿ 3 ವರ್ಷಗಳಾದರೂ ಕೆರೆಗಳಿಗೆ ನೀರು ತುಂಬಿಸಿಲ್ಲ ಇದಕ್ಕೆ ತಾಲ್ಲೂಕಿನ ಶಾಸಕರ ನಿರ್ಲಕ್ಷ್ಯ ಕಾರಣವಾಗಿದ್ದು ಈ ಯೋಜನೆ ವಿಫಲವಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಅವರ ಜೊತೆ ಹೋಗಿ ಬರ ಪರಿಶೀಲನೆ ಮಾಡದೇ ಅವರ ಪುತ್ರರನ್ನು ಕಳಿಸುತ್ತಾರೆ, ರಾಗಿ ಮಾರಾಟವಾಗಿ 6 ತಿಂಗಳು ಆಗಿದ್ದರೂ ಇನ್ನೂ ರಾಗಿ ಹಣ ಬಿಡುಗಡೆ ಆಗಿಲ್ಲ, ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಅನುಮತಿ ಅವಶ್ಯಕತೆಯಿಲ್ಲ, ರೈತರ ಸಾಲ ಮನ್ನಾ ಮಾಡುವ ಅದಿಕಾರ ರಾಜ್ಯ ಸರ್ಕಾರಕ್ಕಿದೆ ಆದರೂ ಮುಖ್ಯಮಂತ್ರಿಗಳನ್ನು ಶಾಸಕರು ಒತ್ತಾಯ ಮಾಡಿ ಹಣ ಬಿಡುಗಡೆ ಮಾಡಿಸದೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.


ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಮುಖಂಡರಾದ ರವಿ, ಗಗನ್, ಜೆ.ಎಸ್ ನಾಗರಾಜ್, ಸುನಿತಾ ಮಂಜುನಾಥ್, ಕೆ.ರಮೇಶ್, ಸತೀಶ್, ನಿರಂಜನ್, ಮಂಜುನಾಥ್ ಸಿಂಗ್, ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್, ಬಸವರಾಜೆ ಅರಸ್, ರೇಣುಕಾಸ್ವಾಮಿ, ಬಿ.ಜೆ ದೇವರಾಜ್ ಸೇರಿದಂತೆ ಜೆಡಿಎಸ್ ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು ಸದಸ್ಯರು ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.